ನವೋದಯ ಕಲಾರಂಗ ಮುಂಬಯಿ ಯ ಯಶಸ್ವಿ ನಾಟಕ "ಊರೇ ಗತಿ "92ನೇ ಪ್ರಯೋಗ,
ನವೋದಯ ಕಲಾರಂಗ ಮುಂಬಯಿ ಯ ಯಶಸ್ವಿ ನಾಟಕ "ಊರೇ ಗತಿ "92ನೇ ಪ್ರಯೋಗ,
ರಂಗಭೂಮಿ ಬದುಕಿನ ಪಾಠ ಕಲಿಸುತ್ತದೆ :
ಶ್ಯಾಮ್ ಎನ್. ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಸೆ 18 ,ನಗರದ ಹಿರಿಯ ನಾಟಕ ಸಂಸ್ಥೆ
ನವೋದಯ ಕಲಾರಂಗ ಮುಂಬಯಿ ಯ ಕಲಾವಿದರು ಅಭಿನಯಿಸಿದ ಯುವ ಕಲಾವಿದರ ಸೇರ್ಪಡೆಯೊಂದಿಗೆ ದಿವಂಗತ ಶ್ರೀನಾಥ್ ಮುಲ್ಕಿ ರಚಿಸಿರುವ, ಚಂದ್ರಕಾಂತ್ ಸಾಲ್ಯಾನ್ ಸಸಿಹಿತ್ತು,ನಿರ್ದೇಶನದ, ಚಲನಚಿತ್ರ ನಟ ನಿರ್ದೇಶಕ ಸಂಘಟಕ ಮನೋಹರ್ ಶೆಟ್ಟಿ ನಂದಳಿಕೆ ಅಭಿನಯದ, ರಾಜೇಶ್ ಹೆಗ್ಡೆ ಹೆರ್ಮುಂಡೆ ಸಂಗೀತ ದ
ಮಂಜುನಾಥ್ ಶೆಟ್ಟಿಗಾರ್. ವರ್ಣಾಲಂಕಾರದ , ಅಶೋಕ್ ಸಸಿಹಿತ್ತು ಸಮಗ್ರ ನಿರ್ವಹಣೆ ಯಶಸ್ವಿ ನಾಟಕ ಊರೇ ಗತಿ 92ನೇ ಪ್ರಯೋಗ ಸೆಪ್ಟಂಬರ್ .16. ನೇ ಶನಿವಾರ ನವಿ ಮುಂಬೈ ಘನ್ನೋಲಿ, ಯ ಶ್ರೀ ಮೂಕಾಂಬಿಕಾ ದೇವಸ್ಥಾನ ದ ಸಭಾಂಗಣದಲ್ಲಿ ನಡೆಯಿತು,
ನಾಟಕದ ಮಧ್ಯಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯುವ ರಂಗ ಕಲಾವಿದ ಜಗದೀಶ್ ರೈ (ರಂಗನಟ/ಗೌ ಪ್ರಧಾನ ಕಾರ್ಯದರ್ಶಿ ನವಿ ಮುಂಬಯಿ ಕನ್ನಡ ಸಂಘ, ವಾಶಿ) ಮತ್ತು ಬಾಲಕೃಷ್ಣ ಶೆಟ್ಟಿ ಮೂಡಬಿದಿರೆ (ಅಧ್ಯಕ್ಷರು, ಅಭಿನಯ ಮಂಟಪ ಮುಂಬಯಿ, ಶಿವ ಛತ್ರಪತಿ ಪುರಸ್ಕೃತ) ಇವರನ್ನು ಸನ್ಮಾನಿಸಲಾಯಿತು,
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರ ಶ್ಯಾಮ್ ಎನ್. ಶೆಟ್ಟಿ ಮಾತನಾಡುತ್ತಾ ಈ ನಾಟಕವನ್ನು ನೋಡುವಾಗ ನಾನು ಮುಂಬೈಗೆ ಬಂದ ದಿನಗಳು ಮತ್ತೆಮರುಕಳಿಸುವಂತಾಗಿದೆ, ರಂಗಭೂಮಿ ನಮಗೆ ಬದುಕಿನ ಪಾಠ ಕಳಿಸುತ್ತದೆ, ಕಲಾವಿದರ ತಂಡ ನಮ್ಮ ಹಿಂದೂ ಧರ್ಮವನ್ನು ಕೂಡ ರಕ್ಷಿಸುವ ಕೆಲಸ ನಡೆಸುತ್ತಿದೆ, ಸನಾತನ ಹಿಂದೂ ಧರ್ಮವನ್ನು ಜಾಗೃತಿಗೊಳಿಸುವ ಕೆಲಸ ಕಾರ್ಯಗಳು ನಾವೆಲ್ಲರೂ ಮಾಡಬೇಕಾಗಿದೆ , ಇಂದು ಈ ವೇದಿಕೆಯಲ್ಲಿ ಇದು ನಡೆದಿದೆ, ಇಬ್ಬರು ರಂಗ ಕಲಾವಿದರನ್ನು ಗುರುತಿಸಿ ಸನ್ಮಾನಿಸಿದ್ದಾರೆ, ಇದು ಬಹಳ ಅಗತ್ಯದ ಸನ್ಮಾನ, ನಮ್ಮ ಊರಿನವರು ಮುಂಬೈಗೆ ಬಂದು ಇಲ್ಲಿ ಬದುಕು ಕಟ್ಟಿರುವ ಚಿತ್ರಣವನ್ನು ಊರೇ ಗತಿ ನಾಟಕದಲ್ಲಿ ಚಿತ್ರಿಸಿದ್ದಾರೆ ,ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಯಶಸ್ವಿ ಪ್ರದರ್ಶನವನ್ನು ಕಾಣುವಂತಾಗಲಿ ಅದಕ್ಕೆ ನಾವೆಲ್ಲರೂ ಸಹಕಾರ ನೀಡುವ ಎಂದು ನುಡಿದರು,
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ದ ನೀಡಿದ ಘಸ್ಫೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿ ಅಣ್ಣ ಶೆಟ್ಟಿ
ನಮ್ಮ ಜಿಲ್ಲೆಯ ಅತಿ ಪ್ರಸಿದ್ಧ ಎರಡು ಕಲಾ ಕ್ಷೇತ್ರ ಯಕ್ಷಗಾನ ಮತ್ತು ನಾಟಕ , ಇದನ್ನು ಉಳಿಸುವ ಕಾರ್ಯದಲ್ಲಿ ಮುಂಬೈಯ ಕಲಾಭಿಮಾನಿಗಳು ಮಾಡುತ್ತಿದ್ದಾರೆ, ಮನುಷ್ಯನಿಗೆ ಎರಡು ರೀತಿಗಳ ಹಸಿವಿರುತ್ತದೆ ಅದರಲ್ಲಿ ಸಾಂಸ್ಕೃತಿಕ ಹಸಿ ಒಂದು ಅವನಲ್ಲಿರುತ್ತದೆ, ನಾಟಕಗಳು ಕಲಾಭಿಮಾನಿಗಳ ಸಾಂಸ್ಕೃತಿಕ ಹಸಿವನ್ನು ನಿರ್ವಹಿಸುವುದರಲ್ಲಿ ಯಶಸ್ವಿಯಾಗುತ್ತಿದೆ, ಮನೋರಂಜನೆ ನಮ್ಮ ಬದುಕಿಗೆ ಅಗತ್ಯವಿದೆ ಅದು ನಮ್ಮನ್ನು ಉಲ್ಲಾಸವಾಗಿ ಇರುವಂತೆ ಮಾಡುತ್ತದೆ, ಇಂದು 92 ಪ್ರದರ್ಶನವನ್ನು ನೀಡಿದ ನಾಟಕ ಇದು ಸಾಮಾನ್ಯ ಸಾಧನೆ ಅಲ್ಲ ಇದರ ಹಿಂದೆ ಪರಿಶ್ರಮಗಳು ಬಹಳಷ್ಟು ಇದೆ. ಮುಂದೆ ನೂರು ಪ್ರದರ್ಶನವಾಗುವ ಮೂಲಕ ಈ ತಂಡ ರಂಗಭೂಮಿಯಲ್ಲಿ ಹೊಸತನವನ್ನು ತರಲಿ. ನಮ್ಮ ಬದುಕೆ ನಾಟಕ ಇದು ಭಗವಂತನ ನಿಯಮದಂತೆ ನಾವೆಲ್ಲರೂ ಅಭಿನಯಿಸುತ್ತೇವೆ, ಆದ್ದರಿಂದ ನಾವೆಲ್ಲರೂ ಭಗವಂತನನ್ನು ಅಂತರಾತ್ಮದಿಂದ ಜಪಿಸಬೇಕು. ನಮ್ಮ ಬದುಕು ಯಶಸ್ವಿಯಾಗ ಬೇಕಿದ್ದರೆ ಆತನು ಅನುಗ್ರ ಅಗತ್ಯವಿದೆ, ಬದುಕಿನ ರಂಗಭೂಮಿಯಲ್ಲಿ ಯಶಸ್ವಿ ಆಗಬೇಕು ಎನ್ನುವ ಸಂಕಲ್ಪವನ್ನು ಅಂತರಾತ್ಮದ ಭಗವಂತನನ್ನು ಸ್ಮರಣೆ ಮಾಡುತ್ತಿರಬೇಕು ಎಂದು ನುಡಿದರು.
ಗೌರವ ಅಥಿತಿ ಬಂಟರ ಸಂಘ ಮುಂಬೈಯ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ, ಪಡುಬಿದ್ರೆ ತನ್ನ ಅನಿಸಿಕೆಗಳನ್ನು ತಿಳಿಸುತ್ತಾ ಈ ನಾಟಕ ತಂಡದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಮನೋಹರ್ ಶೆಟ್ಟಿ ಅವರು ನನ್ನ ಕಲಾ ಸೇವೆಗೆ ಮಾರ್ಗದರ್ಶಕರಾಗಿದ್ದಾರೆ, ಈ ನಾಟಕದಲ್ಲಿ ಅರ್ಥಪೂರ್ಣ ಸಂದೇಶವಿದೆ. ನಮ್ಮನ್ನು ಜಾಗೃತ್ತಿಗೊಳಿಸಿದೆ ಅದರೊಟ್ಟಿಗೆ ಹಿಂದು ಧರ್ಮವನ್ನು ಜಾಗೃತಿಗೊಳಿಸುವ ಕೆಲಸ ಈ ಸಭಾ ಕಾರ್ಯಕ್ರಮದಲ್ಲಿ ನಡೆದಿದೆ. ಮುಂದೆ ನವಿ ಮುಂಬೈಯಲ್ಲಿ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಹಿಂದುಗಳೆಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು,
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ ಮುಖ್ಯಸ್ಥರದ ಶಿವ ಪ್ರಸಾದ್ ಪೂಜಾರಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಊರಿನ ನಾಟಕ , ಯಕ್ಷಗಾನ ತಂಡಗಳು ಮುಂಬೈಯತ್ತ ಬಹಳಷ್ಟು ಪ್ರದರ್ಶನ ಕೊಳ್ಳುತ್ತಿದೆ ,ಅದಕ್ಕೆ ನಾನು ಕೂಡ ಸಹಕಾರ ನೀಡುವ ಮೂಲಕ ಯಕ್ಷಗಾನವನ್ನು ಪ್ರದರ್ಶಿಸಿಕೊಂಡಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಮುಂಬೈಯ ಕಲಾಭಿಮಾನಿಗಳೆಲ್ಲ ರೂ ಮುಂಬೈಯ ಕಲಾವಿದರಿಗೆ ಕಲಾ ಸಂಸ್ಥೆಗೆ ಪ್ರೋತ್ಸಾಹ ನೀಡುವುದನ್ನು ಮಾತ್ರ ಕಡಿಮೆ ಮಾಡಬಾರದು, ಮುಂಬೈಯ ಕಲಾತಂಡಕ್ಕೆ ನಾಟಕ ಪ್ರದರ್ಶನ ಮಾಡುವ ಅವಕಾಶ ಮಾಡುವ ಮೂಲಕ ಕಲೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ಎಂದು ನುಡಿದರು
, ಮುಖ್ಯ ಅತಿಥಿ ಬಿಲ್ಲವ ಅಸೋಸಿಯೇಷನ್ ಮುಂಬೈ ಮಾಜಿ ಅಧ್ಯಕ್ಷರು ಚಂದ್ರಶೇಖರ್ ಪೂಜಾರಿ ಮಾತನಾಡಿ ಕಲೆಯನ್ನು ಆರಾಧಿಸುವ ಮೂಲಕ ನಮ್ಮ ಧರ್ಮವನ್ನು ಕೂಡ ಆರಾಧಿಸಿಕೊಳ್ಳಬೇಕು ಪ್ರತಿಯೊಬ್ಬರ ಮನೆಯಲ್ಲಿ ಭಗವದ್ಗೀತೆಯನ್ನು ಇಡಬೇಕು ಎಂದು ನುಡಿದರು,
ಬಿಲ್ಲವರ ಅಸೋಸಿಯೇಷನ್ ಮುಂಬಯಿ ಸಾಂಸ್ಕೃತಿಕ ವಿಭಾಗ ಕಾರ್ಯಾಧ್ಯಕ್ಷರುದಯಾನಂದ ಆರ್ . ಪುಜಾರಿ
ಮಾತನಾಡುತ್ತಾ ನವೋದಯ ತಂಡ ಯಶಸ್ವಿಯಾಗಿ 92 ಪ್ರದರ್ಶನದ ವನ್ನು ನೀಡಿದೆ ಅತಿ ವೇಗದಲ್ಲಿ 100 ಪ್ರದರ್ಶನ ನೀಡುವಂತಾಗಲಿ ಅದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡುವ ಎಂದು ನುಡಿದರು,
ಹಿರಿಯ ರಂಗ ಕಲಾವಿದ ಕಲಾ ಪೋಷಕ ವಸಂತ್ ಕಾರ್ಕಳ ಮಾತನಾಡುತ್ತಾ ಈ ನಾಟಕ ಪ್ರದರ್ಶನದ ಪ್ರಾರಂಭದ ದಿನಗಳಲ್ಲಿ ನಾನು ಈ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೆ, ಈ ನಾಟಕ ಪ್ರದರ್ಶನಕ್ಕೆಬಹಳಷ್ಟು ಕಷ್ಟಕರವಾಗಿತ್ತು ಆದರೂ ನಾಟಕವನ್ನು ನೋಡಿದ ಬೆಂಗಳೂರಿನ ಕಲಾತಂಡ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದವು ಆದರೆ ಅದಕ್ಕೆ ಸರಿಯಾದ ವ್ಯವಸ್ಥೆ ಆಗಲಿಲ್ಲ, ಆದರೂ ಕೂಡ ಈ ಸಂಸ್ಥೆಯವರು ಈ ನಾಟಕವನ್ನು 92 ಪ್ರದರ್ಶನ ಮಾಡುವ ಮೂಲಕ ಶ್ರಮಿಸುತ್ತಿದ್ದಾರೆ. ನಾನು ನವೋದಯ ತಂಡದ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆಲಸದ ಒತ್ತಡಗಳಿಂದ ಸಂಸ್ಥೆಯಿಂದ ದೂರ ಇದ್ದೆ, ತಂಡದ ಚಟುವಟಿಕೆಗಳನ್ನು ನೋಡುತ್ತಿದ್ದೇನೆ ಎಲ್ಲಾ ಸದಸ್ಯರು ಪರಿಶ್ರಮದಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಅವರೆಲ್ಲರಿಗೂ ಸಹಕಾರ ನೀಡುವ ಎಂದು ನುಡಿದರು,
, ತುಳು ಕನ್ನಡ ವೆರ್ ಅಸೋಸಿಯೇಷನ್ ಕಾಮೋಟೆ ಅಧ್ಯಕ್ಷ ಸುಜಿತ್ ಪುಜಾರಿ ಮಾತನಾಡುತ್ತಾ ಐದು ಜನ ಕಲಾವಿದರು ಒಗ್ಗಟ್ಟಿನಿಂದ ಸ್ಥಾಪಿಸಿರುವ ಈ ತಂಡ ಯಶಸ್ವಿ ನಾಟಕಗಳನ್ನು ನೀಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದೆ, ನಾಟಕ ತಂಡ ಕೇವಲ ಮನೋರಂಜನೆಯನ್ನು ನೀಡದೆ ಧರ್ಮ ಜಾಗೃತಿಯ ಕೆಲಸದಲ್ಲಿ
ತೊಡಗಿಕೊಂಡಿರುವುದು ಈ ವೇದಿಕೆಯಲ್ಲಿ ನಾವೆಲ್ಲರೂ ಕಾಣುವಂತಾಗಿದೆ. ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಸಂಸ್ಕಾರವನ್ನುಮರೆಯುತ್ತಿದ್ದೇವೆ ಇಂತಹ ಕಾಲಘಟ್ಟದಲ್ಲಿ ನಾಟಕ ತಂಡ ನಮ್ಮನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ, ನಾಟಕದ ಕಥೆಯನ್ನೇ ನೋಡುವಾಗ ನಮಗೆ ಹರಿಯುತ್ತಿದೆ ಹಿರಿಯರು ಮುಂಬೈಗೆ ಬಂದಾಗ ಯಾವ ಕಷ್ಟಗಳನ್ನು ಅನುಭವಿಸಿದ್ದಾರೆ ಅವರ ಬದುಕು ಕಟ್ಟಿದ ರೀತಿ ಎಲ್ಲವನ್ನು ಇದು ತೆರೆದಿಟ್ಟಿದೆ , ಈ ನಾಟಕ 92 ಪ್ರದರ್ಶನ ಮಾಡಬೇಕಿದ್ದರೆ ಅದರ ಹಿಂದೆ ಬಹಳಷ್ಟು ಶ್ರಮವಿದೆ. ರಂಗಭೂಮಿಯ ಕಲೆ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವ ಎಂದು ನುಡಿದರು
ವೇದಿಕೆಯಲ್ಲಿ ಉದ್ಯಮಿ ಹಾಗೂ ಕಲಾಪೊಷಕರು ಪ್ರಶಾಂತ್ ಪೂಜಾರಿ ಅಲದಂಗಡಿ,ಮುಲುಂಡ್ ಬಂಟ್ಸ್ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷರು ಸುರೇಶ್ ಶೆಟ್ಟಿ ಕಡಂದಲೆ, ಉಪಸ್ಥರಿದ್ದರು,
ತಂಡಕ್ಕೆ ವಿಶೇಷ ಸಹಕಾರ ನೀಡಿದ ಪ್ರಶಾಂತ್ ಪೂಜಾರಿ
ಅಲದಂಗಡಿದಂಪತಿಯನ್ನು ಗೌರವಿಸಲಾಯಿತು
ಕಾರ್ಯಕ್ರಮವನ್ನು ಸಂಘಟಕ ಕಲಾವಿದ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ನಿರೂಪಿಸಿದರು ,ನವೋದಯ ತಂಡದ ಅಧ್ಯಕ್ಷ ನಟ ನಿರ್ದೇಶಕ ಮನೋಹರ್ ಶೆಟ್ಟಿ, ನಂದಳಿಕೆ ಪ್ರಸ್ತಾವಿಕ ಮಾತುಗಳಾಡಿದರು
, ನವೋದಯದ ಕಾರ್ಯದರ್ಶಿಅಶೋಕ್ ಸಸಿಹಿತ್ತು, ಕೋಶಧಿಕಾರಿ ಚಂದ್ರಕಾಂತ್ ಸಾಲ್ಯಾನ್ ಸಸಿಹಿತ್ತು ಮತ್ತಿತರ ತಂಡದ ಸದಸ್ಯರು
ಅತಿಥಿಗಳನ್ನು ಗೌರವಿಸಿದರು,
ಗೀತಾ ದೇವಾಡಿಗ ಮತ್ತು ಚಂದ್ರಕಾಂತ್ ಸಾಲ್ಯಾನ್ ಸನ್ಮಾನಿತರನ್ನು ಪರಿಚಯಿಸಿದರು,
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಆಸೀನರಾಗಿದ್ದ ಅತಿಥಿ ಗಣ್ಯರಿಗೆ ತಿಲಕ ವಿಟ್ಟು, ಕೇಸರಿ ಸಾಲನ್ನು ನೀಡಿ ದೀಪ ಸ್ತಂಭ ನೀಡಿ ಗೌರವಿಸಿದರು,
Post a Comment