ಭುವಾಜಿ ಶ್ರೀನಿವಾಸ ತಿಂಗಳಾಯ ನಿಧನ
ಭುವಾಜಿ ಶ್ರೀನಿವಾಸ ತಿಂಗಳಾಯ ನಿಧನ
ಶ್ರೀ ಮಹಾವಿಷ್ಣು ಮಂದಿರದ
ಸ್ಥಾಪಕ ಸದಸ್ಯರು ಹಲವಾರು ವರ್ಷಗಳಿಂದ ಮಂಡಳಿಯಲ್ಲಿ ನಿಸ್ವಾರ್ಥ ಸೇವೆಗೈದು ಇಂದು ಶನಿವಾರ ತಾರೀಕು 02. 09. 2023 ರಂದು ಡೊಂಬಿವಲಿ ಪಶ್ಚಿಮದ ಕಾಳು ನಗರದ ನಿವಾಸಿಯಾಗಿರುವ ಮೂಲತಃ ಹೆಜಮಾಡಿಯವರದ 73 ವರ್ಷ ಪ್ರಾಯದ ಶ್ರೀ ಶ್ರೀನಿವಾಸ ತಿಂಗಳಾಯ ರವರು ಅಲ್ಪಕಲಾದ ಅನಾರೋಗ್ಯ ದಲ್ಲಿದ್ದು ನಿಧನ ಹೊಂದಿದರೆಂದು ತಿಳಿಸಲು ವಿಷದಿಸುತ್ತೇವೆ.
ಇವರು ಹಲವಾರು ಸಂಸ್ಥೆ ಗಳಲ್ಲಿ ಸಕ್ರಿಯರಾಗಿದ್ದು, ಉತ್ತಮ ಹಾರ್ಮೋನಿಯಂ ವಾದಕರಾಗಿದ್ದು, ಉತ್ತಮ ಭಜನಾ ಗಾಯಕರು ಹಾಗೂ ಶನಿಗ್ರಂಥ ಪರಾಯಣದ ವಾಚಕರು ಆಗಿದ್ದು, ಶ್ರೀ ಮಹಾ ವಿಷ್ಣು ಮಂದಿರದಲ್ಲಿ ಅರ್ಚಕರಾಗಿಯೂ ಕಾರ್ಯ ನಿರ್ವಹಿಸಿರುವರು. ಪರಿಸರದಲ್ಲಿ ಭುವಾಜಿ ಎಂದೇ ಕರೆಯಲ್ಪಡುತ್ತಿದ್ದರು.
ಮೃತರು ಓರ್ವ ಪುತ್ರ, ಕುಟುಂಬ ಸದಸ್ಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದು, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಆ ಭಗವಂತನು ಚಿರಶಾಂತಿ ಯನ್ನು ಒದಗಿಸಲಿ ಎಂದು ಮುಂಬ್ರ ಮಿತ್ರ ಭಜನಾ ಮಂಡಳಿಯ ಗೌರವ ಅಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಬಿಲ್ಲವರ ಅಸ್ಸೋಸಿಯಶನ್ ಡೊಂಬಿವಲಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.
Post a Comment