ಬಿಲ್ಲವರ ಅಸೋಸಿಯೇಷನ್ ನಾಲಾಸೋಪರ : ಸೆ. 3 ರಂದು ವಿರಾರ್ ಸ್ಥಳೀಯ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಉತ್ಸವ
ಬಿಲ್ಲವರ ಅಸೋಸಿಯೇಷನ್ ನಾಲಾಸೋಪರ ವಿರಾರ್ ಸ್ಥಳೀಯ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಉತ್ಸವ ಸೆಪ್ಟಂಬರ್ 3 ರ ಆದಿತ್ಯವಾರ ದಂದು ರೀಜೇನ್ಸಿ ಬಾಂಕ್ವೇಟ್ ಹಾಲ್.ಅಗ್ನಿಶಾಮಕದಳದ ಮುಂಬಾಗ ಆಗ್ರವಾಲ್ ಚೌಕ್. ವಸೈ ನಾಲಾಸೋಪರ ಲಿಂಕ್ ರೋಡ್.ನಾಲಾಸೋಪರ ಪೂರ್ವ. ಇಲ್ಲಿ ನಡೆಯಲಿದೆ.
ಬೆಳಿಗ್ಗೆ 8 ಗಂಟೆಯಿಂದ 9 ಗಂಟೆ ತನಕ ಓಂ ನಮೋ:ನಾರಾಯಣ ಜಪ. 9 ರಿಂದ11.30 ತನಕ ಭಜನೆ ತದನಂತರ ಕುಣಿತ ಭಜನೆ 12 ಗಂಟೆಗೆ ಮಂಗಳಾರತಿ ತೀರ್ಥ ಪ್ರಸಾದ ಅನ್ನ ಸಂತರ್ಪಣೆ. * ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಬಿಲ್ಲವರ ಎಸೋಸಿಯೇಷನ್ ಮುಂಬಯಿ,ನಾಲಸೋಪರ ವಿರಾರ್ ಸ್ಥಳೀಯ ಕಚೇರಿ. ಕಾರ್ಯಾದ್ಯಕ್ಷರು ಗಣೇಶ್ ವಿ. ಸುವರ್ಣ, ಮತ್ತು ಪದಾಧಿಕಾರಿಗಳು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

Post a Comment