".

Header Ads

ಶಿರ್ವ:- ಕ್ಯಾನ್ಸರ್ ರೋಗದಿಂದ ವಿದ್ಯಾರ್ಥಿನಿಯೋರ್ವಳು ನಿಧನ


 

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಶಿರ್ವ ಮೂಲದ ಯುವ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಮೃತ ವಿದ್ಯಾರ್ಥಿನಿಯನ್ನು ಶಿರ್ವ ಚರ್ಚ್ ಸಮೀಪದ ಕಾನ್ವೆಂಟ್ ರಸ್ತೆಯ ರಿಯಾನ್ನಾ ಜೀನ್ ಡಿ’ಸೋಜಾ (20) ಎಂದು ಗುರುತಿಸಲಾಗಿದೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರಿಯಾನ್ನ ಕಳೆದ ವರ್ಷ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಮಂಚೂಣಿಯಲ್ಲಿದ್ದ ರಿಯಾನ್ನಾ ಅತ್ಯುತ್ತಮ ನೃತ್ಯಪಟುವಾಗಿದ್ದರು ಹಾಗೂ ಹಲವಾರು ನೃತ್ಯಗಳಿಗೆ ಕೋರಿಯೊಗ್ರಾಫಿ ಮಾಡಿದ್ದರು.

ಶಿರ್ವ ಸೈಂಟ್ ಮೇರಿಸ್ ವಿದ್ಯಾಸಂಸ್ಥೆ ಹಾಗೂ ನಿಟ್ಟೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದ ಇವರು ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಂಕಾಂ ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾಗುವುದರಲ್ಲಿದ್ದರು. ಇದೇ ವೇಳೆ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತ ರಿಯಾನ್ನಾ ತಾಯಿ, ಸಹೋದರ ಹಾಗೂ ಅಪಾರ ಸ್ನೇಹಿತರು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Powered by Blogger.