ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿವಿಜೃoಭಣೆಯಿoದ ಜರಗಿದ ನೂತನ ಕಾರ್ಯಾಲಯದ ಶುಭಾರಂಭ ಮತ್ತು ಗುರು ಜಯಂತಿ ಆಚರಣೆ
ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ
ವಿಜೃoಭಣೆಯಿoದ ಜರಗಿದ ನೂತನ ಕಾರ್ಯಾಲಯದ ಶುಭಾರಂಭ ಮತ್ತು ಗುರು ಜಯಂತಿ ಆಚರಣೆ
ಮುಂಬಯಿ, ಸೆ. 5 : ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ನೂತನ ಕಾರ್ಯಾಲಯದ ಶುಭಾರಂಭ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 169 ನೇ ಜಯಂತಿ ಆಚರಣೆಯು ಸೆ. 3 ರಂದು ರವಿವಾರ ಥಾಣೆ ಪಶ್ಚಿಮದಲ್ಲಿರುವ ಸಂಘದ ನೂತನ ಕಾರ್ಯಾಲಯ 9 ಮಾನಸಿಯಲ್ಲಿ ವಿಜೃಂಭಣೆಯಿoದ ಜರಗಿತು.
ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 7-00 ರಿಂದ ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಗಣಹೋಮ, ಲಕ್ಷ್ಮಿ ಪೂಜೆ, ಮಂಟಪ ಶುದ್ಧಿ, ಗುರು ಪೂಜೆ ಮುಂತಾದ ಧಾರ್ಮಿಕ ವಿಧಿ- ವಿಧಾನಗಳನ್ನು ಗುರುಪ್ರಸಾದ ಭಟ್ ಮತ್ತು ತಂಡದವರು ನೆರವೇರಿಸಿದರು.
ತದನಂತರ ನೂತನ ಕಾರ್ಯಾಲಯವನ್ನು ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ಸಮಾಜದ ಗೌರವಾನ್ವಿತ ಗಣ್ಯರುಗಳಾದ ಮಂಜುನಾಥ ಎ. ಬಿಲ್ಲವ ಶಿರೂರು ( ಸಂಘದ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು-ಟೆಕ್ನೋ ಫ್ಲೋ ಕನಸ್ಟ್çಕ್ಸನ್ ಪ್ರೈವೇಟ್ ಲಿಮಿಟೆಡ್), ಆನಂದ ಎಮ್. ಪೂಜಾರಿ (ಸಂಘದ ಮಾಜಿ ಅಧ್ಯಕ್ಷರು ಹಾಗೂ ನ್ಯಾಯವಾದಿ ಉಚ್ಚ ನ್ಯಾಯಾಲಯ ಮುಂಬಯಿ), ವಿಶ್ವನಾಥ ಎ. ಪೂಜಾರಿ ಕೋಡಿ (ಉದ್ಯಮಿ- ಅರುಣಾ ಟೆಕ್ಸ್ಟೈಲ್ಸ್ ಥಾಣೆ), ತಿಮ್ಮಪ್ಪ ಸಿ. ಪೂಜಾರಿ ಬಾಗಾಳಮನೆ ಏಳಜಿತ್ (ಉದ್ಯಮಿ ಮುಂಬಯಿ), ಡಾ. ಶೇಖರ ಹೆಮ್ಮಾಡಿ ( ಶಿಶು ತಜ್ಞ ), ಸುರೇಶ ಸಿ. ಪೂಜಾರಿ, ಬಡಾಕೆರೆ-ನಾವುಂದ (ಉದ್ಯಮಿ, ಮುಂಬಯಿ) ಮತ್ತು ಮಾಜಿ ಅಧ್ಯಕ್ಷರಾದ ಎಸ್. ಟಿ. ಪೂಜಾರಿ ಇವರುಗಳು ದೀಪ ಪ್ರಜ್ವಲಿಸಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು.
ಬಳಿಕ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 169 ನೇ ಜಯಂತಿ ಪ್ರಯುಕ್ತ ಭಜನೆ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿತು ಸದಸ್ಯರು, ಸಮಾಜ ಬಾಂಧವರು ಹಾಗೂ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಎನ್. ಎಮ್. ಬಿಲ್ಲವ, ಆನಂದ ಕೆ. ಪೂಜಾರಿ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಸುಶೀಲ ಆರ್. ಪೂಜಾರಿ, ಹರೀಶ್ ಎನ್. ಪೂಜಾರಿ, ಜತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ರತ್ನಾಕರ ಎಸ್. ಪೂಜಾರಿ, ಆಂತರಿಕ ಲೆಕ್ಕಪರಿಶೋಧಕ ರಾಜೀವ ಎಮ್. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ, ಕಾರ್ಯದರ್ಶಿ ಬಾಬು ಎ. ಪೂಜಾರಿ ಮತ್ತು ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
Post a Comment