".

Header Ads

500 ಕೋಟಿ ಕೊಡದಿದ್ದರೇ 'ಪ್ರಧಾನಿ ನರೇಂದ್ರ ಮೋದಿ' ಹತ್ಯೆ: 'ಇ-ಮೇಲ್'ನಲ್ಲಿ ಬೆದರಿಕೆ

 


ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ ಸೆರೆವಾಸದಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಬಿಡುಗಡೆ ಮಾಡುವ ಜೊತೆಗೆ 500 ಕೋಟಿ ರೂ ಕೊಡದಿದ್ದರೇ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಿ, ಅಹಮಾದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಸ್ಪೋಟಿಸುವುದಾಗಿ ಬರೆದಿರುವ ಅನಾಮಿಕ ಇ-ಮೇಲ್ ಎನ್‌ಐಎಗೆ ರವಾನಿಯಾಗಿದೆ.

ಈ ಹಿನ್ನಲೆಯಲ್ಲಿ ದೇಶಾದ್ಯಂತ ಭಾರೀ ಕಟ್ಟೆಚ್ಚರವನ್ನು ವಹಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಭದ್ರತಾ ಪಡೆ ಸೇರಿ ಗುಜರಾತ್ ಹಾಗೂ ಮುಂಬೈ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಇದಲ್ಲದೇ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಹಾಗೂ ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಭಾರೀ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

ಗುರುವಾರ ಮುಂಜಾನೆ ಎನ್‌ಎಐಗೆ ಬೆದರಿಕೆ ಸಂಬಂಧ ಇ-ಮೇಲ್ ರವಾನಿಯಾಗಿದೆ. ಅದರಲ್ಲಿ ಸರ್ಕಾರ ನಮಗೆ 500 ಕೋಟಿ ರೂ ಕೊಡುವ ಜೊತೆಗೆ ಲಾರೆನ್ಸ್ ಬಿಷ್ಣೋಯಿ ಬಿಡುಗಡೆ ಮಾಡದಿದ್ದರೇ ಪ್ರಧಾನಿ ಮೋದಿ ಹತ್ಯೆ ಮಾಡಿ, ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಢಾಂಗಣವನ್ನು ಸ್ಪೋಟಿಸಲಿದ್ದೇವೆ. ಭಾರತದಲ್ಲಿ ಏನನ್ನೂ ಬೇಕಾದರೂ ಖರೀದಿಸಬಹುದು. ಹಾಗೆಯೇ ನಾವು ಏನನ್ನೋ ಖರೀದಿಸಿದ್ದು ನೀವು ಎಷ್ಟೇ ಕಟ್ಟೆಚ್ಚರ ವಹಿಸಿದ್ದರೂ ನಮ್ಮ ಗುರಿ ಸಾಧಿಸಲು ಯಾವುದೇ ಅಡ್ಡಿಯಾಗುವುದಿಲ್ಲ. ನೀವು ನಮ್ಮ ಜೊತೆ ಮಾತನಾಡಲು ಬಯಸುವುದಾದದರೇ ಇದಕ್ಕೆ ಪ್ರತ್ಯುತ್ತರ ಕೊಡಿ ಅಂತ ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ.

Powered by Blogger.