ಮತಾಂಧ ಕೃತ್ಯ ನಡೆಸಿದ ಸಮಾಜಘಾತುಕ ಶಕ್ತಿಗಳನ್ನು ಯುಪಿ ಮಾದರಿ ಎನ್ಕೌಂಟರ್ ಮಾಡಿ ಆಸ್ತಿ ಜಪ್ತಿ ಮಾಡಬೇಕು :ಅರುಣ್ ಪುತ್ತಿಲ
ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ನಂತರ ಭಯಾನಕ ಹಿಂಸಾಚಾರ ನಡೆದ ಎಲ್ಲಾ ಮನೆಗಳಿಗೆ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿ ಸರ್ಕಾರ ಈ ಕ್ರೌರ್ಯ ಘಟನೆಯನ್ನು ಶೀಘ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಸಂತ್ರಸ್ಥರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ಒದಗಿಸಬೇಕು. ಮತಾಂಧ ಕೃತ್ಯ ನಡೆಸಿದ ಸಮಾಜಘಾತುಕ ಶಕ್ತಿಗಳನ್ನು ಯುಪಿ ಮಾದರಿ ಎನ್ಕೌಂಟರ್ ಮಾಡಿ ಆಸ್ತಿ ಜಪ್ತಿ ಮಾಡಬೇಕು, ಈಗಲೂ ಹಿಂದೂಗಳು ಅಲ್ಲಿ ಭಯದ ವಾತಾವರಣದಲ್ಲಿ ಬದುಕು ಸವೆಸುತ್ತಿದ್ದಾರೆ. ಈ ಘಟನೆಯಲ್ಲಿ ಭಯೋತ್ಪಾದಕ ಬೆಂಬಲಿಗರ ಕೈವಾಡವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು .
ಮತಾಂಧ ಟಿಪ್ಪು, ಔರಂಗಜೇಬನನ್ನು ವೈಭವೀಕರಿಸಿ ತಲವಾರು ತೋರಿಸಿ ಪೊಲೀಸರಿಗೆ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಆಗಿದೆ .
ಖುದ್ದು ಎಸ್ಪಿಯವರನ್ನೇ ಕಲ್ಲು ತೂರಾಟ ನಡೆಸಿ ಓಡಿಸಿದ್ದಾರೆ ಈ ಮತಾಂಧ ಶಕ್ತಿಗಳು ಈ ಎಲ್ಲಾ ಸಂತ್ರಸ್ತರ ಮನೆಗಳಿಗೆ ಅರುಣ್ ಪುತ್ತಿಲ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ತಿಳಿಸಿದರು.
ಶಿವಮೊಗ್ಗ ರಾಗಿಗುಡ್ಡದಲ್ಲಿ ಲಕ್ಷ್ಮೀ ಎಂಬವರು ತಾಳಿ ಅಡವಿಟ್ಟು ಆಟೋ ಖರೀದಿಸಿದ್ದು ಮತಾಂದರ ಕ್ರೂರತೆಗೆ ಆಟೋ ಜಖಂಗೊಂಡಿದೆ.
ಹಲವು ಮನೆಗಳ ಕಿಟಕಿ, ಬಾಗಿಲು , ಗೋಡೆ ಜಖಂಗೊಂಡಿದೆ. ಸ್ವಂತ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕಿ ಮನೆಗೆ ಅವರ ಶಿಷ್ಯಂದಿರೇ ಕಲ್ಲು ತೂರಾಟ ನಡೆಸಿದ್ದು ನೆನೆಸಿಕೊಂಡು ನಿವೃತ್ತ ಶಿಕ್ಷಕಿ ಬೇಸರ ವ್ಯಕ್ತಪಡಿಸಿದರು.

Post a Comment