ಉಂಡು ಹೋದ ಕೊಂಡು ಹೋದ..!
ಮದುವೆ ಮನೆಯಿಂದ ವ್ಯಕ್ತಿಯೋರ್ವ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಕಲಿ ಕೀ ಬಳಸಿ ಸಂಬಂಧಿಕರ ಮನೆಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಆರೋಪಿಯನ್ನು ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ರಫೀಕ್ (35) ಬಂಧಿತ ಆರೋಪಿ.
ಬಂಧಿತನಿಂದ 1.10 ಕೋಟಿ ಮೌಲ್ಯದ 1.8 ಕೆಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಷಹನವಾಜ್ ಗುಜರಿ ವ್ಯಾಪಾರಿಯಾಗಿದ್ದು, ತಿಲಕ್ ನಗರದ ಎಸ್.ಆರ್.ಕೆ ಗಾರ್ಡನ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

Post a Comment