".

Header Ads

ರಸ್ತೆಯಲ್ಲಿ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಸುಡಬೇಕು: ಹೈಕೋರ್ಟ್

 


ರಸ್ತೆಯಲ್ಲಿ ಬೈಕ್ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಗಳನ್ನು ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ 

ವ್ಹೀಲಿಂಗ್ ಮಾಡಿ ಬಂಧಿತನಾದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ವ್ಹೀಲಿಂಗ್ ಮಾಡುವವರ ಬೈಕ್ ಗಳನ್ನು ಸುಟ್ಟು ಹಾಕಬೇಕು ಎಂದು ಹೇಳಿದೆ.

ಯೂಟ್ಯೂಬರ್ ಟಿಟಿಎಫ್ ವಾಸನ್ ಚೆನ್ನೈ -ಬೆಂಗಳೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಚಿತ್ರೀಕರಣ ಮಾಡುವ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ನಂತರ ಅವರ ವಿರುದ್ಧ ಪೊಲೀಸರು ಅಪಾಯಕಾರಿ ಚಾಲನೆ ನಿಯಮದಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ವಾಸನ್ ಮದ್ರಾಸ್ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ವಾಸನ್ ಗೆ ಚಾಟಿ ಬೀಸಿದೆ. ರಸ್ತೆಗಳಲ್ಲಿ ಬೈಕ್ ಸ್ಟಂಟ್, ವ್ಹೀಲಿಂಗ್ ಮಾಡುವವರ ಬೈಕ್ ಗಳನ್ನು ಸುಟ್ಟು ಹಾಕಬೇಕು ಎಂದು ಅಭಿಪ್ರಾಯಪಟ್ಟು ಜಾಮೀನು ಅರ್ಜಿ ವಜಾಗೊಳಿಸಿದೆ.

Powered by Blogger.