".

Header Ads

ನಟಿ ಶ್ರೀದೇವಿಯದ್ದು ಅಸಹಜ ಸಾವು : ಬೋನಿ ಕಪೂರ್


2018ರ ಫೆಬ್ರವರಿ 24ರಂದು ದುಬೈನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವೀಗೀಡಾಗಿದ್ದ ಬಹುಭಾಷಾ ನಟಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ ಎಂಬುದಾಗಿ ಪತಿ ಬೋನಿ ಕಪೂರ್ ತಿಳಿಸಿದ್ದಾರೆ.

ದುಬೈ ನ ಸ್ಟಾರ್​ ಹೋಟೆಲ್ ವೊಂದರ ಬಾತ್​ಟಬ್​ನಲ್ಲಿ ಮುಳುಗಿ ಅವರು ಕೊನೆಯುಸಿರೆಳೆದಿದ್ದರು ಎಂಬುದಾಗಿ ಸುದ್ದಿಯಾಗಿತ್ತು.

ಆಕೆಯದ್ದು ಸಹಜ ಸಾವಲ್ಲ, ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ ಎಂದು ಕೆಲವರು ಪತಿ ಬೋನಿ ಕಪೂರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿನ ಪೊಲೀಸರು ಕೂಡ ಬೋನಿ ಕಪೂರ್ ಮೇಲೆ ಅನುಮಾನಗೊಂಡು ಭಾರೀ ವಿಚಾರಣೆ ನಡೆಸಿದ್ದರು. ಇದೀಗ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ಇಲ್ಲಿ ಯಾವುದೇ ಮೋಸದಾಟ ಇರಲಿಲ್ಲ. ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ತರಹದ ವಿಚಾರಣೆ ಎದುರಿಸಿದೆ. ಕೊನೆಗೆ ಬಂದ ವರದಿಯಲ್ಲಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಸ್ಪಷ್ಟವಾಯಿತು. ತೆರೆಮೇಲೆ ಅಂದವಾಗಿ ಕಾಣಿಸಬೇಕು ಎಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದಳು. ಇದರಿಂದ ಸಾಕಷ್ಟು ಬಾರಿ ನಿತ್ರಾಣಗೊಂಡು ಬೀಳುತ್ತಿದ್ದಳು. ಲೋ ಬಿಪಿ ಸಮಸ್ಯೆಯಿಂದಾಗಿ ಆಕೆ ಸಾವೀಗೀಡಾಗಿದ್ದುದಾಗಿ ಹೇಳಿದರು.

Powered by Blogger.