ಬಿಜೆಪಿಗೆ ಸೇರಿದ ಚರ್ಚ್ ಪಾದ್ರಿ – ಕೆಲವೇ ಗಂಟೆಗಳಲ್ಲಿ ಚರ್ಚ್ನಿಂದ ಗೇಟ್ ಪಾಸ್
ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬರು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಅವರನ್ನು ಪಾದ್ರಿ ಸ್ಥಾನದಿಂದ ಅಮಾನತುಗೊಳಿಸಿದ ಘಟನೆ ಕೇರಳದ ಇಡುಕ್ಕಿಯ ಸಿರೋ-ಮಲಬಾರ್ ನಡೆದಿದೆ.ಇಡುಕ್ಕಿಯ ಸಿರೋ-ಮಲಬಾರ್ ಚರ್ಚ್‌ನ ಕ್ಯಾಥೋಲಿಕ್ ಪಾದ್ರಿ ಕುರಿಯಾಕೋಸ್ ಮಟ್ಟಮ್ ಅವರು ಸೋಮವಾರ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ನಂತರ ಚರ್ಚ್‌ನ ಎಲ್ಲಾ ಕರ್ತವ್ಯದಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಚರ್ಚ್‌ನಲ್ಲಿ ಕರ್ತವ್ಯಗಳಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ.ಮಂಕುವಾ ಚರ್ಚ್‌ನ ಫಾದರ್ ಕುರಿಯಾಕೋಸ್ ಮಟ್ಟಂ ಅವರನ್ನು ಪಾದ್ರಿ ಹುದ್ದೆಯಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ಪ್ರಕಟಣೆ ತಿಳಿಸಿದೆ. ಚರ್ಚ್ ಆಡಳಿತದ ಅಡಿಯಲ್ಲಿ, ಚರ್ಚ್‌ನ ಪಾದ್ರಿಯೊಬ್ಬರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ ಅಥವಾ ಸಕ್ರಿಯವಾಗಿ ಭಾಗವಹಿಸುವಂತಿಲ್ಲ ಎಂಬ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

Post a Comment