".

Header Ads

ಪೋಷಕರೇ ನೀವು ಮಕ್ಕಳನ್ನು 'ಸೂಪರ್ ಮಾರ್ಕೇಟ್'ಗೆ ಕರೆದೊಯ್ಯುತ್ತಿದ್ದೀರಾ.? ಅದಕ್ಕೂ ಮುನ್ನ ಈ ಸುದ್ದಿ ಓದಿ

 


ಮಕ್ಕಳ ಬಗ್ಗೆ ಎಷ್ಟೇ ಪೋಷಕರು ಕಾಳಜಿ ವಹಿಸಿದರೂ, ಕೆಲವೊಮ್ಮೆ ಅಘಾತಕಾರಿ ಘಟನೆಗಳು ನಡದೇ ಬಿಡುತ್ತವೆ. ತೆಲಂಗಾಣದಲ್ಲಿ ಇಂತದ್ದೇ ಒಂದು ಘಟನೆ ನಡೆದಿದ್ದು, ರೆಫ್ರಿಜರೇಟರ್ ತೆರೆಯಲು ಹೋಗಿ, ನಾಲ್ಕು ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.

 

ತೆಲಂಗಾಣದ ನಿಜಮಾಬಾದ್ ನ ನವೀಪೇಟ್ ಮಂಡಲದಲ್ಲಿ ಇಂದು ಸೂಪರ್ಮಾರ್ಕೆಟಿಗೆ 4 ವರ್ಷದ ಬಾಲಕಿ ರಿಶಿತಾಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಐಸ್ ಕ್ರೀಮ್ ಬೇಕು ಅಂತ ಮಗಳ ಆಸೆಯನ್ನು ತಣಿಸೋದಕ್ಕೆ ಮಗಳೊಂದಿಗೆ ಪ್ರಿಡ್ಜ್ ನಲ್ಲಿ ಐಸ್ ಕ್ರೀಮ್ ಹುಡುಕಾಡುತ್ತಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಷಿಸಿ, ಅಲ್ಲಿಯೇ ನೇತಾಡುತ್ತಾ ಜೋತು ಬಿದ್ದಿದ್ದಾರೆ.

ಇದ್ಯಾವುದನ್ನು ಗಮನಿಸದಂತ ತಂದೆ ರಾಜಶೇಖರ್ ಮಾತ್ರ, ಮಗಳಿಗಾಗಿ ರೆಫ್ರಿಜರೇಟರ್ ಮೇಲಿದ್ದಂತ ಐಸ್ ಕ್ರೀಮ್ ಹುಡುಕಾಡಿ ತೆಗೆದುಕೊಂಡು ಮಗಳಿಗೆ ಇನ್ನೇನು ಕೊಡಬೇಕು ಅಂತ ನೋಡಿದಾಗ, ಮಗಳು ಪ್ರಿಡ್ಜ್ ಗೆ ಕೈ ಅಂಟಿಕೊಂಡು ನೇತಾಡುತ್ತಿದ್ದದ್ದು ಗಮನಿಸಿ, ಎಳೆದು ಕೊಂಡಿದ್ದಾನೆ. ಆಗ ಆಕೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಾಗ ಕೈಯಲ್ಲಿದ್ದ ಐಸ್ ಕ್ರೀಮ್ ಬಿಸಾಗಿ ಅಲ್ಲಿದೆ ಮಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ತೆರಳಿದ್ದಾರೆ.

ರಿಶಿತಾ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಂತ ವೇಳೆ, ಪರೀಕ್ಷಿಸಿದಂತ ವೈದ್ಯರು, ಆಕೆ ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ. ಈ ಮೂಲಕ ಐಸ್ ಕ್ರೀಮ್ ಆಸೆಗಾಗಿ ಸೂಪರ್ ಮಾರ್ಕೆಟ್ ಗೆ ತಂದೆಯೊಂದಿಗೆ ತೆರಳಿದ್ದಂತ ಮಗಳು ಧಾರುಣವಾಗಿ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾಳೆ. ಸೂಪರ್ ಮಾರ್ಕೆಟ್ ನಲ್ಲಿ ರೆಫ್ರಿಜರೇಟರ್ ವಿದ್ಯುತ್ ಶಾಕ್ ನಿಂದ ಮಗು ಸಾವನ್ನಪ್ಪಿರೋ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ.ಬಾಲಕಿಯ ಪೋಷಕರು ಮತ್ತು ಇತರ ಸಂಬಂಧಿಕರು ಆಕೆಯ ಶವದೊಂದಿಗೆ ಸೂಪರ್ಮಾರ್ಕೆಟ್ ಮುಂದೆ ಪ್ರತಿಭಟನೆ ನಡೆಸಿ, ನಿರ್ಲಕ್ಷ್ಯಕ್ಕಾಗಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Powered by Blogger.