ಮುಂಬೈ:- ಮತ್ತೊಂದು ಅಗ್ನಿ ದುರಂತ; ದಂಪತಿ ದುರ್ಮರಣ; ಮೂವರ ಸ್ಥಿತಿ ಗಂಭೀರ
ಕುಟುಂಬದ ಮೂವರನ್ನು ರಕ್ಷಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಅಂತಸ್ಥಿನ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ದಂಪತಿ ಹಾಗೂ ಕುಟುಂಬದ ಮೂವರು ಮೊದಲ ಮಹಡಿಯಲ್ಲಿದ್ದರು. ದಂಪತಿಯ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಮಲಗಿದ್ದಲ್ಲಿಯೇ ಉಸಿರು ಚಲ್ಲಿದ್ದಾರೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಇದನ್ನು ಗಮನಿಸಿದ ಸ್ಥಳೀಯರು ಮನೆಯಲ್ಲಿದ್ದ ಉಳಿದ ಮೂವರನ್ನು ರಕ್ಷಿಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Post a Comment