".

Header Ads

ಕ್ರಿಕೆಟ್‌ ಆಡುತ್ತಿದ್ದ ಬಾಲಕ ಕ್ಯಾಚ್‌ ಹಿಡಿಯುವಾಗ ವಿದ್ಯುತ್‌ ತಂತಿ ತಗುಲಿ ಸಾವು

 


 ಕ್ರಿಕೆಟ್‌ ಆಡುತ್ತಿದ್ದ ಧಾರವಾಡ ನಗರದ ಮದಿಹಾಳ ಬಡಾವಣೆಯ ಸಿದ್ದರಾಮ ಕಾಲನಿಯಲ್ಲಿ ಕ್ರಿಕೆಟ್‌ ಆಡುತ್ತಿದ್ದ ವೇಳೆ ಬಾಲಕನೊಬ್ಬ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾನೆ. ಶ್ರೇಯಸ್ ಶಿನ್ನೂರ(16) ಎಂಬಾತನೇ ಮೃತ ಬಾಲಕ.

ಶ್ರೇಯಸ್‌ ಸಂಜೆಯ ಹೊತ್ತು ಕಾಲೊನಿಯ ಇತರ ಗೆಳೆಯರೊಂದಿಗೆ ಸೇರಿ ಮನೆಯ ಟೆರೇಸ್‌ ಮೇಲೆ ಗೆಳೆಯರೊಂದಿಗೆ ಕ್ರಿಕೆಟ್‌ ಆಡುತ್ತಿದ್ದ. ಹೀಗೆ ಕ್ರಿಕೆಟ್‌ ಆಡುತ್ತಿದ್ದ ಶ್ರೇಯಸ್‌ ಕ್ಯಾಚ್‌ ಹಿಡಿಯಲೆಂದು ಪ್ರಯತ್ನಿಸುವ ವೇಳೆ ವಿದ್ಯುತ್‌ ತಂತಿ ತಗುಲಿದೆ.

ಕ್ಯಾಚ್‌ ಹಿಡಿಯಲು ಬಾಗಿದಾಗ ಮನೆಯ ಟೆರೇಸ್‌ ಪಕ್ಕದಲ್ಲಿ ಹಾದು ಹೋದ ವಿದ್ಯುತ್‌ ತಂತಿ ತಗುಲಿದೆ. ಇದರಿಂದ ತೀವ್ರ ಅಸ್ವಸ್ಥರಾದ ಶ್ರೇಯಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶ್ರೇಯಸ್‌ ಜೊತೆಗಿದ್ದ ಗೆಳೆಯನಿಗೂ ಗಾಯವಾಗಿದ್ದು, ಆತನನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Powered by Blogger.