".

Header Ads

ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿಯಲ್ಲಿ ಜುಲೈ 21, 2024 ರಂದು ಗುರುಪೂರ್ಣಿಮಾ ಮಹೋತ್ಸದ ಆಯೋಜನೆ !

 


ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿಯಲ್ಲಿ ಗುರುಪೂರ್ಣಿಮಾ ಮಹೋತ್ಸದ ಆಯೋಜನೆ !

ಗುರು ಪೂರ್ಣಿಮೆಯ ಮೂಲಕ ಸಮಾಜದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯರಾಗಿರಿ! – ಹಿಂದೂ ಜನಜಾಗೃತಿ ಸಮಿತಿ

 ಉಡುಪಿ :ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿಯಲ್ಲಿ  ಜುಲೈ 21, 2024 ರಂದು ಗುರುಪೂರ್ಣಿಮಾ ಮಹೋತ್ಸದ ಆಯೋಜನೆ !ಭವ್ಯವಾದ ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಸಂವರ್ಧನೆಗೊಳಿಸುವ ಅತ್ಯುನ್ನತ ಕಾರ್ಯವು ಗುರು-ಶಿಷ್ಯ ಪರಂಪರೆಯಿಂದಾಗಿ ಸಾಧ್ಯವಾಯಿತು. ಇಂತಹ ತೇಜಸ್ವಿ ಗುರು-ಶಿಷ್ಯ
ರಂಪರೆಯನ್ನು ಸ್ಮರಿಸಲು ಮತ್ತು ಸಮಾಜದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಪ್ರೇರಣೆ ನೀಡಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ವರ್ಷ ಜುಲೈ 21, 2024 ರಂದು ದೇಶದಾದ್ಯಂತ 67 ಸ್ಥಳಗಳಲ್ಲಿ, ಮತ್ತು ಉಡುಪಿಯಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಆಯೋಜಿಸಲಾಗಿದೆ.

ಶ್ರೀಕೃಷ್ಣ-ಅರ್ಜುನ, ಸಮರ್ಥ ರಾಮದಾಸ ಸ್ವಾಮಿ-ಶಿವಾಜಿಮಹಾರಾಜರು, ಆರ್ಯಚಾಣಕ್ಯ-ಚಂದ್ರಗುಪ್ತ, ಗುರುವಿದ್ಯಾರಣ್ಯರು-ಹಕ್ಕ-ಬುಕ್ಕರು, ರಾಮಕೃಷ್ಣಪರಮಹಂಸರು–ಸ್ವಾಮಿವಿವೇಕಾನಂದರು ಇವರಿಂದಾಗಿ ಧರ್ಮ ಸಂಸ್ಥಾಪನೆ ಮತ್ತುರಾಷ್ಟ್ರದ ಉದ್ಧಾರದ ಕಾರ್ಯ ನಡೆಯಿತು. ಗುರುಗಳ ಕೃಪೆಯನ್ನು ಪಡೆಯಲು ನಮಗೆ ಗುರುಗಳ ಧರ್ಮ ಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ನಾವು ನಮ್ಮದಾಗಿಸಿಕೊಳ್ಳಬೇಕು. ಇದರ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಡುಪಿ ಜಿಲ್ಲೆಯ ಈ ಕೆಳಗಿನ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸಲಾಗಿದೆ.

ಭಾನುವಾರ, ಜುಲೈ  21, 2024,
ಸಮಯ : ಸಂಜೆ 5.00 ಗಂಟೆಗೆ
ಸ್ಥಳ : ಶೇಷಶಯನ ಸಭಾಗೃಹ, ಹೊಟೇಲ್ ಕಿದಿಯೂರು, ಉಡುಪಿ

ಈ ಮಹೋತ್ಸವದಲ್ಲಿ, ಶ್ರೀವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಭಾವಚಿತ್ರವನ್ನು ಪೂಜಿಸಲಾಗುತ್ತದೆ (ಗುರುಪೂಜೆ). ‘ಆನಂದಪ್ರಾಪ್ತಿಗಾಗಿ ಸಾಧನೆ ಮತ್ತು ರಾಮರಾಜ್ಯ’ ಈ ವಿಷಯದ ಕುರಿತು ಗಣ್ಯವಕ್ತಾರರ ಮಾರ್ಗದರ್ಶನವಿರಲಿದೆ. ಈ ಮಹೋತ್ಸವದಲ್ಲಿ  ‘ಸ್ವ ಸಂರಕ್ಷಣೆಯ ಪ್ರಾತ್ಯಕ್ಷಿಕೆ’ ವಿಶೇಷ ಆಕರ್ಷಣೆಯ ಕೇಂದ್ರವಾಗಲಿದೆ. ವಿವಿಧ ವಿಷಯಗಳ ಕುರಿತು ಆಧ್ಯಾತ್ಮಿಕ, ರಾಷ್ಟ್ರ ಮತ್ತು ಧಾರ್ಮಿಕ ಗ್ರಂಥಗಳ ಪ್ರದರ್ಶನ, ಜೊತೆಗೆರಾಷ್ಟ್ರ-ಧರ್ಮದ ವಿಷಯಗಳ ಫಲಕಗಳ ಪ್ರದರ್ಶನವನ್ನು ಸಹಆಯೋಜಿಸಲಾಗಿದೆ. ಸಮಸ್ತ ಜನತೆಯು ಈ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತ  ಉಪಸ್ಥಿತರಿದ್ದು ಇದರ ಲಾಭ ಪಡೆಯಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.

Powered by Blogger.