".

Header Ads

ಬಿಜೆಪಿ ಅವಧಿಯಲ್ಲಿ 21 ಹಗರಣ ನಡೆದಿದೆ – ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

 ಬಿಜೆಪಿ ಅವಧಿಯಲ್ಲಿ 21 ಹಗರಣಗಳು ನಡೆದಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ   ಅವರು, ವಿಧಾನಸಭೆ ಕಲಾಪದಲ್ಲಿ 21 ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಸಿಎಂ ಬಿಡುಗಡೆ ಮಾಡಿದ ಹಗರಣಗಳ ಪಟ್ಟಿ

* ಎಪಿಎಂಸಿ ಹಗರಣ – 2020-21 – 47.16 ಕೋಟಿ ರೂ.
* ಭೋವಿ ಅಭಿವೃದ್ಧಿ ನಿಗಮ – 2021-22 – 87.00 ಕೋಟಿ ರೂ.ಗಿಂತಲೂ ಹೆಚ್ಚು
* ದೇವರಾಜ ಅರಸು ಟ್ರಕ್ ಟರ್ಮಿನಲ್ – 2022-23 – ಶ್ರೀರಾಮುಲು 50.00 ಕೋಟಿ ರೂ.ಗಿಂತ ಅಧಿಕ
* ಗಂಗಾ ಕಲ್ಯಾಣ ಯೋಜನೆ – (ಅಂಬೇಡ್ಕರ್, ಭೋವಿ, ಆದಿಜಾಂಬವ, ಮುಂತಾದ ನಿಗಮಗಳು) 2021-22 – 430.00 ಕೋಟಿ ರೂ.ಗಿಂತ ಅಧಿಕ
* ಪ್ರವಾಸೋದ್ಯಮ ಇಲಾಖೆ 2021-22 – ಸಿ.ಪಿ ಯೋಗೇಶ್ವರ್ 2.47 ಕೋಟಿ ರೂ.
* ಕಿಯೋನಿಕ್ಸ್ ಹಗರಣ 2019 ರಿಂದ 2023 – ಅಶ್ವತ್ಥ್ನಾರಾಯಣ – 500 ಕೋಟಿ ರೂ. – ಸಿ.ಎ.ಜಿ. ವರದಿಯಲ್ಲಿ ಉಲ್ಲೇಖ
* ಕೋವಿಡ್ ಹಗರಣ – 2019-20 – ಕೆ.ಸುಧಾಕರ್ – 40,000 ಕೋಟಿಗೂ ಹೆಚ್ಚು ಹಗರಣ
* 40% ಹಗರಣ – 2019-20 – 2,000 ಕೋಟಿ ರೂ.ಗಿಂತ ಅಧಿಕ ಹಗರಣ
* ಪಿಎಸ್‌ಐ ಮತ್ತು ಇತರೆ ನೇಮಕಾತಿ – 2019-20 ಹಾಗೂ 2022-23 – ನೂರಾರು ಕೋಟಿ ರೂ.
* ಪರಶುರಾಮ ಥೀಮ್ ಪಾರ್ಕ್ ಹಗರಣ – 2022-23 – ವಿ. ಸುನೀಲ್‌ಕುಮಾರ್ – 11.00 ಕೋಟಿಗೂ ಹೆಚ್ಚು
* ಬಿಟ್‌ಕಾಯಿನ್ ಹಗರಣ – 2021 ರಿಂದ 2023 – ಸಾವಿರಾರು ಕೋಟಿ ರೂ. ಹಗರಣ
* ಯಡಿಯೂರಪ್ಪ ನವರ ಅಕ್ರಮ ಆಸ್ತಿ – 2021 – 750 ಕೋಟಿ ರೂ.ಗಿಂತ ಹೆಚ್ಚು
* ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ಪ್ರಕರಣ – ನೂರಾರು ಕೋಟಿ
* ಯಡಿಯೂರಪ್ಪ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು.
* ಬಿಜೆಪಿ ಸರ್ಕಾರದ ಅಬಕಾರಿ ಸಚಿವರ ಹಗರಣದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದರು – ನೂರಾರು ಕೋಟಿ ರೂ. ಅಬಕಾರಿ
* ಕೆಕೆಆರ್‌ಡಿಬಿ ಹಗರಣ – 2019-20 ರಿಂದ ಏಪ್ರಿಲ್-2023 – ಪಿ. ಮುನಿರತ್ನ 200 ಕೋಟಿಗೂ ಹೆಚ್ಚು (ದತ್ತಾತ್ರೇಯ ಪಾಟೀಲರೇವೂರ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ)
* ಕಂದಾಯ ಇಲಾಖೆಯ ಹಗರಣ 2019-20 ರಿಂದ ಏಪ್ರಿಲ್-2023 – ಅಶೋಕ್ ಮೇಲೆ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ
* ಕೃಷಿ ಇಲಾಖೆಯಲ್ಲಿ 2021 ರಿಂದ 2023 – ಬಿ.ಸಿ.ಪಾಟೀಲ್ – ಕೃಷಿ ಇಲಾಖೆಯ ನೌಕರರೇ ಲಂಚ ವಸೂಲಿ ಮಾಡುತ್ತಿದ್ದ ಕುರಿತು
ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
* ಮೊಟ್ಟೆ ಹಗರಣ – 2019 ರಿಂದ 2021 – ಶಶಿಕಲಾ ಜೊಲ್ಲೆ ಪರಣ್ಣ ಮುನವಳ್ಳಿ ಕೂಡ ಭಾಗಿಯಾಗಿದ್ದರು.
* ಕೆಐಎಡಿಬಿ 2008 ರಿಂದ 2013 – ಕಟ್ಟಾ ಸುಬ್ರಮಣ್ಯ ನಾಯ್ಡು, ಮುರುಗೇಶ ನಿರಾಣಿ, ಮುಂತಾದವರು ಭಾಗಿಯಾಗಿದ್ದ ಬೃಹತ್ ಹಗರಣ ಕಾಂಡದ ಬಿಸಿ ಇನ್ನೂ ಆರಿಲ್ಲ.
* ಗಣಿ ಹಗರಣ, ಬಿಡಿಎ ಮತ್ತು ಕೆಐಎಡಿಬಿ ಡಿನೋಟಿಫಿಕೇಶನ್ ಹಗರಣ – ಬಿಎಸ್‌ವೈ ಸೇರಿ ಹಲವು ಸಚಿವರಗಳು ಜೈಲಿಗೆ ಹೋಗಿದ್ದಾರೆ.
* ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಬೃಹತ್ ಹಗರಣ – ಸಾವಿರಾರು ಕೋಟಿ ಹಗರಣ – ಐಟಿ, ಇಡಿ, ಸಿಬಿಐ ತನಿಖೆ ಇದುವರೆಗೆ ಯಾರನ್ನೂ ಬಂಧಿಸುವ ಕೆಲಸ ಆಗಿಲ್ಲ.









Powered by Blogger.