ಉಡುಪಿ ಜಿಲ್ಲೆಯಲ್ಲಿ ಮತ್ತು ದೇಶದ 70 ಕ್ಕೂ ಹೆಚ್ಚು ಕಡೆ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ !
ಉಡುಪಿ : ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ; ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವ ಸಂಪನ್ನವಾಗಿದೆ. ಈ ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ. ಪ್ರಭು ಶ್ರೀರಾಮರು ಸಹ ತಮ್ಮ ಗುರುಗಳ ಆಶೀರ್ವಾದ ಪಡೆದು ಆದರ್ಶ ರಾಮರಾಜ್ಯದ ಸ್ಥಾಪನೆಯನ್ನು ಮಾಡಿದ್ದರು. ಈಗ ನಾವೂ ಇಂತಹ ಆದರ್ಶ ರಾಜ್ಯದ ಸ್ಥಾಪನೆಗಾಗಿ ಸುಸಂಸ್ಕೃತ ಆಚರಣೆಗಳೊಂದಿಗೆ ಪ್ರತಿದಿನ ಪ್ರಭು ಶ್ರೀರಾಮನಿಗೆ ಪ್ರಾರ್ಥನೆಯನ್ನು ಮಾಡೋಣ ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ಈ ಸಮಯದಲ್ಲಿ ಕರೆ ನೀಡಿದರು.

ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾ ಗೃಹದಲ್ಲಿ ಹಾಗೂ ಶ್ರೀ ರಂಗನಾಥ ಸಭಾಭವನ, ಸಿದ್ದಾಪುರ ಇಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದರೊಂದಿಗೆ ಜಿಲ್ಲೆಯ ಸಿದ್ದಾಪುರ ಹಾಗೂ ಉಡುಪಿಯಲ್ಲಿ ಮತ್ತು ದೇಶಾದ್ಯಂತ 71 ಸ್ಥಳಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿತ್ತು. ಈ ಮಹೋತ್ಸವದಲ್ಲಿ ಗಣ್ಯವ್ಯಕ್ತಿಗಳಾದ ಕೆಎಂಸಿ ಆಸ್ಪತ್ರೆಯ ಡಾ. ರವಿರಾಜ ಆಚಾರ್ಯ, ಶ್ರೀ. ಗಣೇಶ್ ಕಿಣಿ ಬೆಳ್ವೆ ಇವರೂ ಭಾಗಿಯಾಗಿದ್ದರು. 350 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಲಾಭ ಪಡೆದರು. ಈ ದಿನ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.
.jpeg)
ಉಡುಪಿಯ ಪ್ರಖ್ಯಾತ ವ್ಯಾಪಾರಿ ಶ್ರೀ ರಾಘವೇಂದ್ರ ಆಚಾರ್ಯ ಇವರು ಮಾತನಾಡಿ, ನಮ್ಮ ಸನಾತನ ಧರ್ಮದಲ್ಲಿ ಗುರು ಪೂರ್ಣಿಮೆಗೆ ಬಹಳ ಮಹತ್ವವಿದೆ. ಭಗವಾನ್ ವೇದವ್ಯಾಸರು ಅವತರಿಸಿದ ದಿನವನ್ನೇ ಗುರು ಪೂರ್ಣಿಮೆ ಆಚರಿಸುತ್ತಿದ್ದೇವೆ ಎಂದರು. ಖ್ಯಾತ ಉದ್ಯಮಿಗಳಾದ ಶ್ರೀ. ಗಣೇಶ್ ಕಿಣಿ ಬೆಳ್ವೆ ಇವರು ಮಾತನಾಡಿ ಇವತ್ತಿನ ಶಿಕ್ಷಣ ಪದ್ಧತಿಯು ಸಮಾಜಕ್ಕೆ ಹಣ ಹೇಗೆ ಗಳಿಸುವುದು ಎಂಬುದನ್ನು ಮಾತ್ರ ಕಲಿಸುತ್ತದೆ ಹೊರತು ಗುಣವಂತ ಹೇಗೆ ಆಗಬೇಕು ಎಂಬುದನ್ನು ಕಲಿಸುವುದಿಲ್ಲ. ಇದು ಬದಲಾದರೆ ಮಾತ್ರ ಸಮಾಜವು ಬದಲಾಗುವುದು ಎಂದು ಹೇಳಿದರು.
ವಿಶ್ವದಾದ್ಯಂತದ ಜನತೆಗೆ ಗುರುಪೂರ್ಣಿಮೆಯ ಲಾಭವಾಗಬೇಕೆಂದು ಸಮಿತಿಯು ಗುರುಪೂರ್ಣಿಮಾ ಮಹೋತ್ಸವದ ಲೈವ್ ಪ್ರಸಾರವನ್ನೂ ಮಾಡಿದೆ.
ಕಾರಣಾಂತರಗಳಿಂದ ಯಾರಿಗಾದರೂ ಪ್ರತ್ಯಕ್ಷ ಕಾರ್ಯಕ್ರಮದಲ್ಲಿ ಸಹಭಾಗಿಯಾಗಲು ಅಡಚಣೆಯುಂಟಾಗಿದ್ದಲ್ಲಿ ಸಮಿತಿಯ ಯೂಟ್ಯೂಬ್ ಚಾನೆಲ್ @HJSKarnataka ಗೆ ಭೇಟಿ ನೀಡಿ Recorded Live ವೀಕ್ಷಿಸಬಹುದೆಂದು ಕರೆ ನೀಡಿದೆ.
.jpeg)
Post a Comment