".

Header Ads

ಶ್ರೀರಾಮ ಸೇನೆಯ' ಪ್ರಮುಖರ ಸಾಮಾಜಿಕ ಮಾಧ್ಯಮಗಳು ಬ್ಲಾಕ್ : ದೂರು ಸಲ್ಲಿಸಿದ ಮುತಾಲಿಕ್


ಶ್ರೀ ರಾಮ ಸೇನೆಯ ಪ್ರಮುಖ ಮುಖಂಡರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಲಾಕ್​ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹುಬ್ಬಳ್ಳಿ ಧಾರವಾಡ ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದಾರೆ.

ಕಮಿಷನರ್ ಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಲವ್​ ಜಿಹಾದ್​ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೆಲ್ಪ್ ಲೈನ್​, ತ್ರಿಶೂಲ್​ ದೀಕ್ಷೆ ಮಾಡಿದ್ದಕ್ಕೆ ರಾಜ್ಯಾದ್ಯಂತ ಪ್ರಚಾರ ಸಿಕ್ತು.

ಇದರಿಂದ ಒಂದು ಸಮುದಾಯದವರು ಕೆರಳಿ, ನಮ್ಮ​ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್​ ಮಾಡಿಸಿದ್ದಾರೆ ಎಂಬ ಸುದ್ದಿ ಇದೆ ಎಂದರು.

ಕಳೆದ 15 ದಿನಗಳಿಂದ ನನ್ನ ಸೇರಿ ಶ್ರೀರಾಮ್ ಸೇನೆಯ 20ಕ್ಕೂ ಹೆಚ್ಚು ಪ್ರಮುಖರ ಇನ್​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್​ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ವಿಶೇಷವಾಗಿ ಭಟ್ಕಳ, ಮಂಗಳೂರು ಮತ್ತು ವಿದೇಶದಲ್ಲಿರುವ ಕೆಲವ ಪಾತ್ರ ಇದೆ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸ್​ ಕಮಿಷನರ್ ಎನ್​ ​ಶಶಿಕುಮಾರ್​ಗೆ ದೂರು ಕೊಟ್ಟಿದ್ದೇವೆ. ಕೊಡಲೇ ತನಿಖೆ ನಡೆಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂಬ ವಿನಂತಿ ಮಾಡಿದ್ದೇವೆ ಎಂದರು.

Powered by Blogger.