".

Header Ads

ಮಹಾಮಾರಿ ಡೆಂಗ್ಯೂಗೆ ಯುವತಿ ಬಲಿ

 


ಮಹಾಮಾರಿ ಡೆಂಗ್ಯೂಗೆ ರಾಜ್ಯದಲ್ಲಿ ಮತ್ತೋರ್ವ ಯುವತಿ ಬಲಿಯಾಗಿದ್ದು, ಸಾವಿನ ಸಂಖ್ಯೆ 9 ಕ್ಕೇರಿಕೆಯಾಗಿದೆ.

ಮೃತ ಯುವತಿಯನ್ನು ರೇಖಾ (19) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನಾಮಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು.

ಅಲ್ಲಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು, ನಂತರ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಯುವತಿಗೆ ಶಂಕಿತ ಡೆಂಗ್ಯೂ ಜ್ವರವಿತ್ತು, ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

Powered by Blogger.