".

Header Ads

ಕಾರ್ಕಳ:-ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸ.ಹಿ. ಪ್ರಾಥಮಿಕ ಶಾಲೆ ಕುಂಟಾಡಿಯ ಮಕ್ಕಳಿಗೆ ದ್ವಿತೀಯ ಸ್ಥಾನದ ಕಿರೀಟ


ಶಿವಮೊಗ್ಗದ ಇಂಡೋರ್ ಸ್ಟೇಡಿಯಂನಲ್ಲಿ ಆಗಸ್ಟ್ 4 ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಕುಬುಡೊ ಬುಡೋಕಾನ್ ಕರಾಟೆ ಡೋ ಅಸೋಸಿಯೇಷನ್ ಕರ್ನಾಟಕ.(ರಿ) ಸಂಸ್ಥೆ.ಕರಾಟೆ ಗುರುಗಳಾದ ರೆನ್ಸಿ ಸೋಮನಾಥ್ ಸುವರ್ಣ ಮತ್ತು ಡಾ.ವಿಜಯಲಕ್ಷಿ ಆರ್ ನಾಯಕ್ ಇವರು ತರಬೇತಿ ನೀಡಿರುತ್ತಾರೆ.
.

 ಇವರು ಶ್ರೀಮತಿ ಸುಚಿತ ಮತ್ತು ಮಹೇಶ್ ಪೂಜಾರಿ ಮೂಡುಮನೆ ಕುಂಟಾಡಿ ಇವರ ಮಕ್ಕಳಾದ ಆದಿತ್ಯ ಮತ್ತು ಆಯುಷ್   ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.


ಆದಿತ್ಯ 1-7 ತರಗತಿವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಡಿ ಶಾಲೆಯಲ್ಲಿ ಕಲಿತಿದ್ದು ಈಗ ಎಂಟನೇ ತರಗತಿಗೆ ಕಾರ್ಕಳದ ಎಸ್ ವಿ ಟಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಮತ್ತೋರ್ವ ಆಯುಷ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಡಿಯಲ್ಲಿ ಪ್ರಸ್ತುತ ಆರನೇ ತರಗತಿಯಲ್ಲಿ ಕಲಿತಿದ್ದಾನೆ.

ಇವರ ಸಾಧನೆಗೆ ಪ್ರಮುಖ ಶಿಕ್ಷಕರಾದ ಕೆ .ಮಂಜುಳಾರವರು  ಹಾಗೂ ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಕುಂಟಾಡಿ ಗ್ರಾಮಸ್ಥರು , ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Powered by Blogger.