ಕಾರ್ಕಳ: ಸಾಮೂಹಿಕ ಅತ್ಯಾಚಾರ - ಪೊಲೀಸ್ ವಿಚಾರಣೆಯಲ್ಲಿ ಬಾಯಿ ಬೆಟ್ಟ ರೇಪಿಸ್ಟ್, ಲವ್ ಜಿಹಾದ್ ಈ ಪ್ರಕರಣದ ಮೂಲಕ ಅಂತ್ಯವಾಗಬೇಕು -ಹಿ.ಜಾ ಮುಖಂಡ ಶ್ರೀಕಾಂತ್ ಶೆಟ್ಟಿ
ಕಾರ್ಕಳ ಹಿಂದೂ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಅರೋಪಿ ಅಲ್ತಾಫ್ ಪೊಲೀಸರ ವಿಚಾರಣೆಯಲ್ಲಿ ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂತ್ರಸ್ಥ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡೆ. ಬಳಿಕ ಕಾರಿನಲ್ಲಿ ಕಾರ್ಕಳದ ಕೆಲವು ಸ್ಥಳಗಳಲ್ಲಿ ಸುತ್ತಾಡಿದೆ.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಕರೆದುಕೊಂಡು ಹೋದೆ. ಅಲ್ಲಿ ಸ್ನೇಹಿತರಿಗೆ ಕರೆ ಮಾಡಿ ಮದ್ಯ ತರಲು ಹೇಳಿದೆ. ಸ್ನೇಹಿತರು ಮದ್ಯ ತಂದ ಬಳಿಕ, ಅದರಲ್ಲಿ ಮಾದಕ ದ್ರವ್ಯ ಮಿಶ್ರಣ ಮಾಡಿ ಯುವತಿಗೆ ಕುಡಿಸಿ ಅತ್ಯಾಚಾರ ಎಸಗಿರುವುದಾಗಿ ಪೊಲೀಸರ ಮುಂದೆ ಆರೋಪಿ ಅಲ್ತಾಫ್ ಹೇಳಿದ್ದಾನೆ.ಘಟನೆಯ ಹಿಂದೆ ಲವ್ ಜಿಹಾದ್ ಇದೆ. ಘಟನೆ ಹಿಂದೆ ಅತಿ ದೊಡ್ಡ ಜಾಲವಿದ್ದು, ಅದು ಬೆಳಕಿಗೆ ಬರಬೇಕು. ಲವ್ ಜಿಹಾದ್ ಜೊತೆ ಮಾದಕ ದ್ರವ್ಯದ ಜಿಹಾದ್ ಕೂಡ ಇರುವುದು ಸ್ಪಷ್ಟವಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಪ್ರಕರಣದ ತನಿಖೆ ಮಾಡಬೇಕು. ಇನ್ನು ಪೋಷಕರು ಮನೆಯ ಹೆಣ್ಣು ಮಕ್ಕಳಿಗೆ ಎಚ್ಚರಿಕೆಯನ್ನು ತಿಳಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಆದ ಪರಿಚಯ ಈ ಹಂತಕ್ಕೆ ಬರಲು ಏನು ಕಾರಣ ತನಿಖೆಯಾಗಲಿ. ಪೋಷಕರು ತಮ್ಮ ಹೆಣ್ಣು ಮಕ್ಕಳ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಬೇಕು. ಸಾಕಷ್ಟು ಲವ್ ಜಿಹಾದ್ ಪ್ರಕರಣಗಳಿಗೆ ಕರಾವಳಿ ಸಾಕ್ಷಿಯಾಗಿದೆ. ಇದು ಈ ಪ್ರಕರಣದ ಮೂಲಕ ಅಂತ್ಯವಾಗಬೇಕು ಎಂದು ಹಿಂದೂ ಜಾಗರಣ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.
Post a Comment