".

Header Ads

ಸಿಎಂ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು – ಅಧಿಕೃತವಾಗಿ ಒಪ್ಪಿಕೊಂಡ ಸರ್ಕಾರ


 ಸಿಎಂ ಸಿದ್ದರಾಮಯ್ಯ  ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ. ಈ ಒಂದು ಆದೇಶ ಸಿಎಂಗೆ ಮುಳ್ಳಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.2001 ರಲ್ಲೇ ದೇವನೂರು ಬಡಾವಣೆ ನಿರ್ಮಾಣವಾಗಿದೆ ಎಂದು ಖುದ್ದು ಸಿಎಂ ಪತ್ನಿ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ. ಇದೀಗ ಆ ಸೈಟ್ ಕೊಟ್ಟಿರುವುದು ನಿಯಮ ಬಾಹಿರ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಬಂದಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ‌ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅಮಾನತು ಆದೇಶದಲ್ಲೇ ರಾಜ್ಯ ಸರ್ಕಾರ ಹಲವು ಸತ್ಯ ಬಿಚ್ಚಿಟ್ಟಿದೆ. ಸರ್ಕಾರದ ಅಮಾನತು ಆದೇಶದ ಅಂಶಗಳೇ ಸಿಎಂಗೆ ಮುಳ್ಳಾಗಿದೆ.
50:50 ಅನುಪಾತ 2009 ರಲ್ಲಿ ಜಾರಿಗೆ ಬಂದಿದೆ.

2009 ಕ್ಕಿಂತ ಹಿಂದಿನ ಹಳೆ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲ. ಆದರೆ ಪ್ರಾಧಿಕಾರ 2009 ಹಿಂದಿನ ಬಡಾವಣೆಗಳ ಬದಲಿ ನಿವೇಶನಗಳಿಗಾಗಿ ಮಂಜೂರಾತಿಗಾಗಿ 50:50 ಅನುಪಾತ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಪತ್ನಿಯ ಸಹೋದರನ ಜಾಗವನ್ನು ಮೂಡಾ ವಶಪಡಿಸಿಕೊಂಡಿರೋದು 2001 ರಲ್ಲಿ. ಅಲ್ಲಿಗೆ 50:50 ಅನುಪಾತ ಇದಕ್ಕೆ ಅನ್ವಯ ಆಗಲ್ಲ. ಇದೀಗಾ ಸರ್ಕಾರಿ ಆದೇಶವೇ ಸಿಎಂಗೆ ಮುಳ್ಳಾಗುವ ಸಾಧ್ಯತೆಯಿದೆ.

Powered by Blogger.