".

Header Ads

ಬೆಳ್ಳಂಬೆಳಗ್ಗೆ ಖ್ಯಾತ ನಟ ಗೋವಿಂದ ಕಾಲಿಗೆ ಗುಂಡು,ಆಸ್ಪತ್ರೆಗೆ ದಾಖಲು

 


ನಟ ಗೋವಿಂದ ಅವರು ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದಾರೆ. ಘಟನೆಯು ಮುಂಜಾನೆ ಸುಮಾರು 5 ಗಂಟೆಗೆ ಸಂಭವಿಸಿದೆ.

ತನ್ನದೇ ರಿವಾಲ್ವರ್ ಮಿಸ್‌ಫೈರ್ ಆದ ಕಾರಣ ಗೋವಿಂದ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಘಟನೆ ವರದಿಯಾದ ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗೋವಿಂದನ ಗನ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗೋವಿಂದ ಅವರಿಗೆ ಭಾರಿ ರಕ್ತಸ್ರಾವವಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Powered by Blogger.