".

Header Ads

ರಾಜ್ಯ ಸರ್ಕಾರ: `SC-ST' ವರ್ಗಕ್ಕೆ 17 ದುಬಾರಿ ಕಾಯಿಲೆಗಳ ಚಿಕಿತ್ಸೆಗೆ ನೆರವು....!

 

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ದುಬಾರಿ ವೆಚ್ಚದ 17 ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು 'ಕಾರ್ಪಸ್‌ ಫಂಡ್' ಸ್ಥಾಪಿಸಿ ಭರಿಸುವ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಹೌದು, ರಾಜ್ಯ ಸರ್ಕಾರವು ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ ಅಡಿಯಲ್ಲಿ ಪ್ರಸ್ತುತ ಲಭ್ಯ ಇರುವ 47 ಕೋಟಿ ರೂ. ಮೊತ್ತದಲ್ಲಿ ಕಾರ್ಪಸ್‌ ಫಂಡ್ ಸೃಜಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಒಟ್ಟು 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ರಾಜ್ಯ ಸರ್ಕಾರದ ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ, ಜೀವ ಸಾರ್ಥಕತೆ ಮುಂತಾದ ಯೋಜನೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಉಳಿದ 17 ಕಾಯಿಲೆಗಳ ಚಿಕಿತ್ಸಾ ವಿಧಾನಗಳ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

Powered by Blogger.