".

Header Ads

ಉಡುಪಿ – ನಕಲಿ ವೆಬ್ ಸೈಟ್ ನಂಬಿ 12 ಲಕ್ಷ ಕಳೆದುಕೊಂಡ ವ್ಯಕ್ತಿ

  ನಕಲಿ ವೆಬ್ ಸೈಟ್ ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 12,41,580/- ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ರಾಕೇಶ್‌ ಎಂಬ ವ್ಯಕ್ತಿ 2014ನೇ ಇಸವಿಯಲ್ಲಿ ಕ್ಲಬ್‌ ಮಹೀಂದ್ರ ಹಾಲಿಡೇ ರೆಸಾರ್ಟ್‌ ಇದರ ಸದಸ್ಯತ್ವವನು ಪಡೆದುಕೊಂಡಿದ್ದು ಇದರ ಕಾಲಾವಧಿ 10 ವರ್ಷಗಳಿದ್ದು 2024 ನೇ ಇಸವಿಯಲ್ಲಿ ಮುಗಿದಿರುತ್ತದೆ. ಸದಸ್ಯತ್ವದಿಂದ ಪಿರ್ಯಾದಿದಾರರಿಗೆ ವರ್ಷಕ್ಕೆ 10 ದಿವಸಗಳ ಕಾಲ ರೆಸಾರ್ಟ್‌ನಲ್ಲಿ ಉಚಿತ ವಾಸ್ತವ್ಯದ ವ್ಯವಸ್ಥೆ ಇದ್ದು, ಪಿರ್ಯಾದಿದಾರರು ಇದನ್ನು ಉಪಯೋಗಿಸದೇ ಇದ್ದು, ಅವರ ಖಾತೆಯಲ್ಲಿ ಒಟ್ಟು 40 ದಿವಸಗಳ ಉಚಿತ ವಾಸ್ತವ್ಯದ ವ್ಯವಸ್ಥೆ ಬಾಕಿ ಉಳಿದಿತ್ತು.

ದಿನಾಂಕ 27/01/2025 ರಂದು ರಾಕೇಶ್ ಗೆ ಕ್ಲಬ್‌ ಮಹೀಂದ್ರ ಹಾಲಿಡೇ ರೆಸಾರ್ಟ್‌ ಇವರ ಕಡೆಯವರು ಎಂಬುದಾಗಿ ತಿಳಿಸಿ ಒಂದು ಕರೆ ಬಂದಿದ್ದು ಅವರು ನಾವು ಕ್ಲಬ್‌ ಮಹೀಂದ್ರ ಹಾಲಿಡೇ ರೆಸಾರ್ಟ್‌ ಇದರ ಸಬ್‌ ಏಜೆಂಟ್‌ ಆಗಿದ್ದು ನಮ್ಮ ಸಂಸ್ಥೆಯ ಹೆಸರು ಬ್ಲೂ ಬರ್ಡ್‌ ವೆಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಆಗಿರುತ್ತದೆ ಎಂದು ತಿಳಿಸಿದ್ದು ಕ್ಲಬ್‌ ಮಹೀಂದ್ರ ಹಾಲಿಡೇ ರೆಸಾರ್ಟ್‌ ಸದಸ್ಯತ್ವದ ಪಿರ್ಯಾದಿದಾರರ ಖಾತೆಯಲ್ಲಿದ್ದ 40 ದಿವಸಗಳ ಉಚಿತ ವಾಸ್ತವ್ಯದ ವ್ಯವಸ್ಥೆಯನ್ನು ಬ್ಲೂ ಬರ್ಡ್‌ ವೆಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಅವರು ಉಪಯೋಗಿಸಿ ಅದರಿಂದ ಬಂದ ಮೊತ್ತವನ್ನು ಪಿರ್ಯಾದಿದಾರರಿಗೆ ನೀಡುವುದಾಗಿ ಹಾಗೂ ವಾಸ್ತವ್ಯ ಮಾಡುವ ಗ್ರಾಹಕರ ಹಣವನ್ನು ಮುಂಗಡವಾಗಿ ಪಾವತಿಸುವಂತೆ ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ http://bluebirdvacations.in ರಲ್ಲಿ ಪರಿಶೀಲಿಸುವಂತೆ ತಿಳಿಸಿದ್ದಾರೆ.ರಾಕೇಶ್ ಅದನ್ನು ಪರಿಶೀಲಿಸಿದಾಗ BLUEBIRD VACATIONS PRIVATE LIMITED ಇದರಲ್ಲಿ ನಿಲೋಫರ್‌ ಬಾಬು ಶೇಖ್‌, ನಝೀಮಾ ಬಾಬು ಶೇಖ್‌, ಇಜಾಝ್‌ ಬಾಬು ಶೇಖ್‌ ಹೆಸರಿನ ಮೂರು ಮಂದಿ ಸಂಸ್ಥೆಯ ನಿರ್ದೇಶಕರಿರುತ್ತಾರೆಂದು ತಿಳಿದು ಬಂದಿರುತ್ತದೆ. ಸಂಸ್ಥೆಯು ನಿಜವಾದ ಸಂಸ್ಥೆ ಎಂದು ನಂಬಿ ಬ್ಲೂ ಬರ್ಡ್‌ ವೆಕೇಶನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯಕ್ತಿಗಳು ತಿಳಿಸಿದಂತೆ ಅವರು ಕಳುಹಿಸಿದ ಕ್ಯೂಆರ್‌ ಕೋಡ್‌ಗೆ ರಾಕೇಶ್ ದಿನಾಂಕ 08/02/2025 ರಿಂದ 16/05/2025 ರವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 12,41,580/- ಹಣವನ್ನು UPI ಹಾಗೂ Neft ಮುಖಾಂತರ ಕಳುಹಿಸಿದ್ದು, ಆರೋಪಿತರು ಪಿರ್ಯಾದಿದಾರರು ಹಾಕಿದ ಹಣವನ್ನಾಗಲೀ ಲಾಭಾಂಶವನ್ನಾಗಲೀ ವಾಪಾಸು ನೀಡದೇ ಪಿರ್ಯಾದಿದಾರರಿಗೆ ಮೋಸ ವಂಚನೆಯಿಂದ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2025, ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್. & ಕಲಂ 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Powered by Blogger.