".

Header Ads

ಕಾರ್ಕಳ : ಆರೋಗ್ಯದಲ್ಲಿ ಏರುಪೇರು, ಇಹಲೋಕ ತ್ಯಜಿಸಿದ ಕಾಲೇಜು ವಿದ್ಯಾರ್ಥಿನಿ..!

 

ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಂಭವಿಸಿದೆ. 

ಕಾರ್ಕಳ : ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸಂಭವಿಸಿದೆ.ಏಂಜೆಲ್‌ ಅಲ್ಫೋನ್ಸ ಜೇಮ್ಸ್‌ (17) ಸಾವನ್ನಪ್ಪಿದ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಳೆ. ಹೆಬ್ರಿ ತಾಲೂಕು ಮುದ್ರಾಡಿಯ ಏಂಜೆಲ್‌ ಕಾರ್ಕಳ ಕ್ರೈಸ್ಟ್‌ಕಿಂಗ್‌ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ  ವ್ಯಾಸಾಂಗ ಮಾಡುತ್ತಿದ್ದಳು.ನ. 26ರಂದು ಸ್ಥಳೀಯ ಕ್ರೈಸ್ಟ್‌ಕಿಂಗ್‌ ಚರ್ಚ್‌ನ ವಾರ್ಷಿಕ ಹಬ್ಬವಿದ್ದ ಕಾರಣ ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆಗಳಿಗೆ0 ರಜೆ ಸಾರಲಾಗಿತ್ತು. ಹೀಗಾಗಿ ಏಂಜೆಲ್‌ ಮನೆಯಲ್ಲೇ ಇದ್ದಳು ಈ ಸಂದರ್ಭ ಏಕಾಏಕಿ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದ ಕಾರಣ ಹೆತ್ತವರು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು,ಅಲ್ಲಿ ವೈದ್ಯರು ಚುಚ್ಚುಮದ್ದು ನೀಡಿದ್ದು ಬಳಿಕ ಮನೆಗೆ ಬಂದ  ಏಂಜಲ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಯಲ್ಲಿ ಮತ್ತೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಗುರುವಾರ) ಮುಂಜಾನೆ  ಏಂಜಲ್ ಇಹಲೋಕ ತ್ಯಜಿಸಿದ್ದಾಳೆ. ಏಂಜೆಲ್‌ ಜಾಕೋಬ್‌ ಮತ್ತು ಮೇರಿ ಬೀನಾ ದಂಪತಿಯ ಏಕೈಕ ಪುತ್ರಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

Powered by Blogger.