ಪಳ್ಳಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ, ಸಂಸ್ಥೆಯ ಸಮಾಜಮುಖಿ ಹೆಜ್ಜೆಯಾಗಿ ಸುಸಜ್ಜಿತ ತುರ್ತು ವಾಹನ ಮತ್ತು ಶವ ಸಂರಕ್ಷಿತ ಶೀತ ಘಟಕ ಲೋಕಾರ್ಪಣೆ ಸಮಾರಂಭ ನವೆಂಬರ್ 2ರಂದು ಭಾನುವಾರ ಪಳ್ಳಿಯ ಕೃಷ್ಣ ಸಭಾಭವನ ವಠಾರದಲ್ಲಿ ಭವ್ಯವಾಗಿ ನಡೆಯಿತು.
ಉದ್ಘಾಟಕರಾದ ಶ್ರೀ ಸುರೇಂದ್ರ ಹೆಗ್ಡೆ, ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸಭಾಧ್ಯಕ್ಷರಾದ ಕಾರ್ಕಳ ಶಾಸಕರಾದ ವಿ. ಸುನೀಲ್ ಕುಮಾರ್ , ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತಸರರಾದ ಜಗದೀಶ್ ಹೆಗ್ಡೆ ಯವರು ದಶಮಾನೋತ್ಸವ ಸಂಭ್ರಮದಲ್ಲಿ ಭಾಗಿಯಾಗಿ ಸುಸಜ್ಜಿತ ತುರ್ತು ವಾಹನ ಆಂಬುಲೆನ್ಸ್ ಹಾಗೂ ಶವ ಸಂರಕ್ಷಿತ ಶೀತ ಘಟಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ್ ಹುಬ್ಬಳ್ಳಿ (ಡಿ.ಎಚ್.ಒ., ಉಡುಪಿ), ಹರಿರಾಮ್ ಶಂಕರ್ ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ಉಡುಪಿ), ಡಾ. ಪದ್ಮರಾಜ್ ಹೆಗ್ಡೆ (ಯೂರೋಲಜಿ ತಜ್ಞರು, ಕೆಎಂಸಿ ಮಣಿಪಾಲ), ಡಾ. ಮಂಜುನಾಥ್ ಕೋಟ್ಯಾನ್ (ಪ್ರಾಂಶುಪಾಲರು, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ), ಬಾಲಕೃಷ್ಣ ಪ್ರಭು (ಎಸ್ಟೇಟ್ ಆಫೀಸರ್, ಮಾಹೆ ಮಣಿಪಾಲ), ಪುಂಡಲೀಕ ನಾಯಕ್ (ಧರ್ಮದರ್ಶಿಗಳು, ಅಡಪಾಡಿ), ಪ್ರಸಾದ್ ಶೆಟ್ಟಿ ದೊಡ್ಡಮನೆ (ಉದ್ಯಮಿ) ಹಾಗೂ ಉಷಾ ಯು. ಅಂಚನ್ (ಅಧ್ಯಕ್ಷೆ, ಪಳ್ಳಿ ಗ್ರಾಮ ಪಂಚಾಯತ್) ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಕಾರ್ಯಕ್ರಮವನ್ನು ದಾಮೋದರ್ ಶರ್ಮ ಬಾರ್ಕೂರು ನಿರೂಪಿಸಿದ್ದು, ಸಂಸ್ಥೆಯ ಅಧ್ಯಕ್ಷ ಸತ್ಯಾನಂದ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪ್ರಭು, ಕೋಶಾಧಿಕಾರಿ ಕಾಂತೇಶ್ ಶೆಟ್ಟಿ ಮತ್ತು ಗೌರವ ಸಲಹೆಗಾರರು ಸಹಿತ ಎಲ್ಲಾ ಸದಸ್ಯರು ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿದ್ದರು .ಈ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ,“ಭಕ್ತಿಗಾಯನ,ನೃತ್ಯಸಿಂಚನ ಹಾಗೂ ನೃತ್ಯರೂಪಕ “ನಾರಸಿಂಹ” ಕಾರ್ಯಕ್ರಮ ನಡೆಯಿತು.
Post a Comment