".

Header Ads

ನಿಂಜೂರು ಮಾಳಿಗೆ ಮನೆ ವಾರಿಜ ಮಾಧವ ಫೌಂಡೇಶನ್ ವತಿಯಿಂದ ಅವರ ಅಮ್ಮನ ನೆನಪಿನ ಸ್ಮರಣಾರ್ಥಕವಾಗಿ ದಶಮಾನೋತ್ಸವದ ಸಂದರ್ಭದಲ್ಲಿ ಪಳ್ಳಿ ಫ್ರೆಂಡ್ಸ್‌ಗೆ ಸುಸಜ್ಜಿತ ಅಂಬ್ಯುಲೆನ್ಸ್ ಕೊಡುಗೆ.

 ಪಳ್ಳಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ, ಸಂಸ್ಥೆಯ ಸಮಾಜಮುಖಿ  ಹೆಜ್ಜೆಯಾಗಿ ಸುಸಜ್ಜಿತ ತುರ್ತು ವಾಹನ ಮತ್ತು ಶವ ಸಂರಕ್ಷಿತ ಶೀತ ಘಟಕ  ಲೋಕಾರ್ಪಣೆ ಸಮಾರಂಭ ನವೆಂಬರ್‌ 2ರಂದು ಭಾನುವಾರ  ಪಳ್ಳಿಯ ಕೃಷ್ಣ ಸಭಾಭವನ ವಠಾರದಲ್ಲಿ ಭವ್ಯವಾಗಿ ನಡೆಯಿತು.   

ನಿಂಜೂರು ಮಾಳಿಗೆ ಮನೆ ವಾರಿಜ ಮಾಧವ ಫೌಂಡೇಶನ್ ವತಿಯಿಂದ  ಅವರ ಅಮ್ಮನ ನೆನಪಿನ ಸ್ಮರಣಾರ್ಥಕವಾಗಿ  ದಶಮಾನೋತ್ಸವದ ಸಂದರ್ಭದಲ್ಲಿ ಪಳ್ಳಿ ಫ್ರೆಂಡ್ಸ್‌ಗೆ ಸುಸಜ್ಜಿತ ಅಂಬ್ಯುಲೆನ್ಸ್ ಉಚಿತವಾದ ಕೊಡುಗೆ ನೀಡಿದರು.

                                                                                                               
ಉದ್ಘಾಟಕರಾದ  ನಿಂಜೂರು ಮಾಳಿಗೆ ಮನೆ  ಶ್ರೀ ಸುರೇಂದ್ರ ಹೆಗ್ಡೆ ಯವರು , ಕಾರ್ಕಳ ಶಾಸಕರಾದ ವಿ. ಸುನೀಲ್ ಕುಮಾರ್    ,  ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರರು   ,   ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತಸರರಾದ ಜಗದೀಶ್ ಹೆಗ್ಡೆ ಯವರು  ದಶಮಾನೋತ್ಸವ ಸಂಭ್ರಮದಲ್ಲಿ ಭಾಗಿಯಾಗಿ ಸುಸಜ್ಜಿತ ತುರ್ತು ವಾಹನ ಅಂಬುಲೆನ್ಸ್ ,  ಶವ ಸಂರಕ್ಷಿತ ಶೀತ ಘಟಕ ಉದ್ಘಾಟಿಸಿ   ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಡಾ. ಬಸವರಾಜ್ ಹುಬ್ಬಳ್ಳಿ (ಡಿ.ಎಚ್.ಒ., ಉಡುಪಿ), ಹರಿರಾಮ್ ಶಂಕರ್ ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ಉಡುಪಿ), ಡಾ. ಪದ್ಮರಾಜ್ ಹೆಗ್ಡೆ (ಯೂರೋಲಜಿ ತಜ್ಞರು, ಕೆಎಂಸಿ ಮಣಿಪಾಲ), ಡಾ. ಮಂಜುನಾಥ್ ಕೋಟ್ಯಾನ್ (ಪ್ರಾಂಶುಪಾಲರು, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ), ಬಾಲಕೃಷ್ಣ ಪ್ರಭು (ಎಸ್ಟೇಟ್ ಆಫೀಸರ್, ಮಾಹೆ ಮಣಿಪಾಲ), ಪುಂಡಲೀಕ ನಾಯಕ್ (ಧರ್ಮದರ್ಶಿಗಳು, ಅಡಪಾಡಿ), ಪ್ರಸಾದ್ ಶೆಟ್ಟಿ ದೊಡ್ಡಮನೆ (ಉದ್ಯಮಿ) ಹಾಗೂ ಉಷಾ ಯು. ಅಂಚನ್ (ಅಧ್ಯಕ್ಷೆ, ಪಳ್ಳಿ ಗ್ರಾಮ ಪಂಚಾಯತ್) ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಕಾರ್ಯಕ್ರಮವನ್ನು ದಾಮೋದರ್ ಶರ್ಮ ಬಾರ್ಕೂರು ನಿರೂಪಿಸಿದ್ದು, ಸಂಸ್ಥೆಯ ಅಧ್ಯಕ್ಷ ಸತ್ಯಾನಂದ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪ್ರಭು, ಕೋಶಾಧಿಕಾರಿ ಕಾಂತೇಶ್ ಶೆಟ್ಟಿ ಮತ್ತು ಗೌರವ ಸಲಹೆಗಾರರು ಸಹಿತ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ
ದರು.
Powered by Blogger.