ಡಿಸೆಂಬರ್ 26 ರಿಂದ ರೈಲ್ವೆ ಪ್ರಯಾಣದರ ಏರಿಕೆ
ಭಾರತೀಯ ರೈಲ್ವೇ ಇಲಾಖೆ ಇದೇ ಡಿಸೆಂಬರ್ 26 ರಿಂದ ರೈಲ್ವೆ ಪ್ರಯಾಣದರ ಏರಿಕೆ ಮಾಡಲು ನಿರ್ಧಾರ ಮಾಡಿದ್ದು, ಇದರಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.
ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಎಸಿ ಹಾಗೂ ನಾನ್ ಎಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ ಮಾಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಉಪನಗರ ರೈಲುಗಳಲ್ಲಿನ ಮಾಸಿಕ ಸೀಸನ್ ಟಿಕೆಟ್ ಹಾಗೂ ಇತರೆ ರೈಲುಗಳಲ್ಲಿ 215 ಕಿ.ಮೀ ವರೆಗಿನ ಸಾಮಾನ್ಯ ದರ್ಜೆಯ ಪ್ರಯಾಣದರದಲ್ಲಿ ಯಾವುದೇ ಏರಿಕೆ ಇಲ್ಲ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
215 ಕಿ.ಮೀ ಮೇಲ್ಪಟ್ಟ ರೈಲಿನ ಸಾಮಾನ್ಯ ದರ್ಜೆಯ ಪ್ರಯಾಣ ದರದಲ್ಲಿ ಪ್ರತಿ ಕಿ.ಮೀಗೆ 1 ಪೈಸೆ ಏರಿಕೆ ಮಾಡಲಾಗಿದೆ. ಪ್ರಯಾಣ ದರ ಏರಿಕೆಯಿಂದ 2026ರ ಮಾರ್ಚ್ ವೇಳೆಗೆ ರೈಲ್ವೆ ಇಲಾಖೆಗೆ ಹೆಚ್ಚುವರಿಯಾಗಿ ₹600 ಕೋಟಿ ಆದಾಯ ಬರಲಿದೆ’ ಎಂದು ಅವರು ಹೇಳಿದ್ದಾರೆ. 2025ರ ಜುಲೈ ತಿಂಗಳಲ್ಲಿ ರೈಲು ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಇಲಾಖೆಗೆ ₹700 ಕೋಟಿ ಆದಾಯ ಬಂದಿದೆ ಎಂದೂ ಅವರು ವಿವರಿಸಿದ್ದಾರೆ.
Post a Comment