ಉಡುಪಿ : ಶ್ರೀಕೃಷ್ಣ ಸಮರ್ಪಣೋತ್ಸವ ಕಾರ್ಯಕ್ರಮ; ಫಲಕ ಅನಾವರಣ, ಪುಸ್ತಕ ಬಿಡುಗಡೆ
ಪುತ್ತಿಗೆ ಮಠದ ಶ್ರೀ ಸುಗುಣೇoದ್ರ ತೀರ್ಥ ಸ್ವಾಮೀಜಿಯ 4 ನೇ ಪರ್ಯಾಯದ ವತಿಯಿಂದ ಮತ್ತು ಅಂತಾರಾಷ್ಟ್ರೀಯ ಶ್ರೀ ಕೃಷ್ಣ ಪ್ರಜ್ಞ ಸಂಸ್ಥೆ ಇಸ್ಕಾನ್ ಆಶ್ರಯದಲ್ಲಿ ಶ್ರೀಲ ಪ್ರಭುಪಾದರಿಗೆ ಪ್ರಯಾಗ್ ರಾಜ್ ಮಹಾ ಕುಂಭ ಮೇಳದಲ್ಲಿ ನೀಡಿದ ವಿಶ್ವಗುರು ಬಿರುದನ್ನು ಉಡುಪಿ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸುವ ಶ್ರೀ ಕೃಷ್ಣ ಸಮರ್ಪಣೋತ್ಸವ ಕಾರ್ಯಕ್ರಮ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಹರಿದ್ವಾರ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಕೈಲಾಶಾನಂದ ಗಿರಿ ಮಹಾರಾಜ್ ಶ್ರೀ ಕೃಷ್ಣ ಸಮರ್ಪಣೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಶ್ರೀ ಕೃಷ್ಣ ಸಮರ್ಪಣೋತ್ಸವಮ್ ಫಲಕ ಅನಾವರಣಗೊಳಿಸಲಾಯಿತು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಸಂಪಾದಿತ ಶ್ರೀಲ ಪ್ರಭುಪಾದ ಚರಿತಾಮೃತಮ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವಿಶ್ವ ಗುರು ಬಿರುದು ನೀಡಿದ ವೀಡಿಯೋ ಪ್ರದರ್ಶಿಸಲಾಯಿತು.
ಪುತ್ತಿಗೆ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಸುಗುಣೇoದ್ರ ತೀರ್ಥ ಸ್ವಾಮೀಜಿ ಶ್ರೀಲ ಪ್ರಭುಪಾದರ ಮೂರ್ತಿಗೆ ಶ್ರೀ ಕೃಷ್ಣನ ಬೆಳ್ಳಿ ಕಿರೀಟವಿಟ್ಟು, ಪುರ್ಪಾರ್ಚನೆಗೈದರು. ಕೈಲಾಶಾನಂದ ಗಿರಿ ಮಹಾರಾಜ್ ಆಶೀರ್ವಚನ ನೀಡಿ, ಇಸ್ಕಾನ್ ಸಂಸ್ಥೆಯ ಸ್ಥಾಪಕ ಶ್ರೀಲ ಪ್ರಭುಪಾದರಿಗೆ ವಿಶ್ವಗುರು ಬಿರುದು ನೀಡುವ ತೀರ್ಮಾನ ಮಾಡುವಾಗ ಅನೇಕರು ವಿರೋಧಿಸಿದರು. ಆದರೂ ದೇವರ ಇಚ್ಛೆ ಯಾವಾಗಲೂ ಬದಲಾಗದು. ಶ್ರೀಲ ಪ್ರಭುಪಾದರು ಶ್ರೀಕೃಷ್ಣನ ಪರಮ ದಾಸರಾಗಿರುವುದಕ್ಕೆ ವಿಶ್ವಗುರು ಆಗಿದ್ದಾರೆ ಎಂದು ಹೇಳಿದರು.

Post a Comment