ಕುಂಟಾಡಿ ಶಾಲೆಯಲ್ಲಿ 2025 - 26 ಸಾಲಿನ ನಿಟ್ಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಸಂಭ್ರಮ
ಕುಂಟಾಡಿ ಶಾಲೆಯಲ್ಲಿ ನಿಟ್ಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಹೊಂದಬೇಕು ಎಂಬ ಹಿನ್ನಲೆಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಡಿಯಲ್ಲಿ ನಿಟ್ಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಆಚರಿಸಲಾಯಿತು.
ದಿನಾಂಕ 15.12.2025ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಡಿಯಲ್ಲಿ ನಿಟ್ಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಬಣ್ಣ ಬಣ್ಣದ ತೋರಣಗಳಿಂದ ಅಲಂಕಾರಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಡಿ
ಕುಂಟಾಡಿ ಶಾಲೆಯು ಬಣ್ಣ ಬಣ್ಣದ ತೋರಣಗಳಿಂದ ಅಲಂಕರಿಸಲಾಗಿತ್ತು ಮುಲಿಹುಲ್ಲಿನ ಸೆಲ್ಫಿ ಕಾರ್ನರ್ (selfie corner) ಜೊತೆಗೆ ಸಿಂಗಾರ ಗೊಂಡ ಶಾಲೆಯು ಎಲ್ಲರ ಕಣ್ಮನ ಸೆಳೆಯುವಂತಿತ್ತು.
ಸರ್ಕಾರಿ ಶಾಲೆಯ ಒಟ್ಟು 110 ವಿದ್ಯಾರ್ಥಿಗಳು ಹಾಗೂ ಪ್ರತಿ ಶಾಲೆಯಿಂದ ಒಬ್ಬರು ಪೋಷಕರು ಈ ಹಬ್ಬದಲ್ಲಿ ಸ್ಪರ್ಧಿಸಿದ್ದರು, ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಈ ಹಬ್ಬಕ್ಕೆ ಆಗಮಿಸಿದ್ದರು.
ಬ್ಯಾಂಡ್ ವಾದನಗಳಿಂದ ಪೋಷಕರ ಮಕ್ಕಳ ಹಾಗೂ ಅತಿಥಿ ಗಣ್ಯರ ಸ್ವಾಗತ
ಬ್ಯಾಂಡ್ ವಾದನಗಳಿಂದ ಮಕ್ಕಳನ್ನು ಹಾಗೂ ಅತಿಥಿ ಗಣ್ಯರನ್ನು ಸ್ವಾಗತಿಸಲಾಗಿತ್ತು. ಸಭಾ ಕಾರ್ಯಕ್ರಮ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತ್ತು. ಕುಂಟಾಡಿ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಕೆ ಮಂಜುಳಾರವರು ಎಲ್ಲರನ್ನು ಸ್ವಾಗತಿಸಿದರು.
C. R. P ಶಿವನಂದ್ ರವರು ಪ್ರಾಸ್ತಾವಿಕ ಮಾತುಗಳಾಡಿದರು, ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂಜಾ , ಉಪಾಧ್ಯಕ್ಷರಾದ ಹರಿಜೀವನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುoಡ್ಕೂರ್ C. R.P ನವೀನ್ , ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸುಕೇಶ್ ಶೆಟ್ಟಿ , SDMC ಅಧ್ಯಕ್ಷರಾದ ದಿವ್ಯ ರವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಮುಗಿದ ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು ಗಟ್ಟಿ ಓದು ,ಕಥೆ ಹೇಳೋದು , ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ರಸಪ್ರಶ್ನೆ , ಮಕ್ಕಳ ಹಾಗೂ ಪೋಷಕ ಸಂಬಂಧ ಹೀಗೆ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಮಕ್ಕಳ ಪೋಷಕ ಸಹ ಸಂಬಂಧ ಸ್ಪರ್ಧೆಯನ್ನು ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿತ್ತು ಇದರಲ್ಲಿ ಸಂಗೀತ ಕುರ್ಚಿ , ಬಕೇಟಿಗೆ ಬಾಲ್ ಹಾಕುವುದು, ಮಗು ಪೋಷಕರ ಬೆನ್ನಿನ ಮೇಲೆ ಬಾಲ್ ಇಟ್ಟು ಓಡುವ ಸ್ಪರ್ಧೆಯನ್ನು ನಡೆಸಲಾಯಿತು, ಆಗಮಿಸಿದ ಎಲ್ಲರಿಗೂ ಉಪಹಾರ ಊಟ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಕೊನೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಪೋಷಕರಿಗೆ ಪ್ರಥಮ ದ್ವಿತೀಯ ದ್ವಿತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಸಹ ಶಿಕ್ಷಕಿ ಹೇಮಾ ಧನ್ಯವಾದ ಸಲ್ಲಿಸಿದರು , ಸಹ ಶಿಕ್ಷಕಿ ಕುಸುಮ ಭಟ್ ಕಾರ್ಯಕ್ರಮ ನಿರೂಪಿಸಿದರು, ಗೌರವ ಶಿಕ್ಷಕಿಯಾದ ಜಯಶ್ರೀರವರು ಸಹಕರಿಸಿದರು




Post a Comment