300 ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್ ವಿಲನ್ ಸಾವು ಅತ್ಯಂತ ಭೀಕರ: ಸೋಫಾದ ಮೇಲೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಶವ!
ಇದು ನಟ ಮಹೇಶ್ ಆನಂದ್ 90ರ ದಶಕದ ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದ ಈ ನಟನ ಜೀವನ ಮತ್ತು ಸಾವಿನ ಬಗ್ಗೆ ತಿಳಿಯಲೇಬೇಕಾದ ಕೆಲವು ಆಘಾತಕಾರಿ ಸಂಗತಿಗಳು ಇಲ್ಲಿವೆ:
ಸಿನಿಮಾ ಜೀವನದ ಏರಿಳಿತ:
1982ರಲ್ಲಿ ಕಮಲ್ ಹಾಸನ್ ಅವರ ‘ಸನಮ್ ತೇರಿ ಕಸಮ್’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಮಹೇಶ್ ಆನಂದ್, ತಮ್ಮ ಎತ್ತರದ ನಿಲುವು ಮತ್ತು ಗಂಭೀರ ನೋಟದಿಂದಲೇ ವಿಲನ್ ಪಾತ್ರಗಳಿಗೆ ಫೇಮಸ್ ಆದರು. ‘ಶಹೇನ್‌ಶಾ’, ‘ಗಂಗಾ ಜಮುನಾ ಸರಸ್ವತಿ’, ‘ಗೂಮ್ರಾ’, ‘ತುಫಾನ್’ ಸೇರಿದಂತೆ ನೂರಾರು ಹಿಟ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 2019ರ ‘ರಂಗೀಲಾ ರಾಜಾ’ ಇವರ ಕೊನೆಯ ಚಿತ್ರ. 5 ಮದುವೆ, 12 ಪ್ರೇಮ ಪ್ರಕರಣಗಳು!
ಮಹೇಶ್ ಆನಂದ್ ಅವರ ವೃತ್ತಿಜೀವನಕ್ಕಿಂತ ವೈಯಕ್ತಿಕ ಜೀವನವೇ ಹೆಚ್ಚು ಚರ್ಚೆಯಲ್ಲಿತ್ತು. ಇವರು ಬರೋಬ್ಬರಿ 5 ಬಾರಿ ಮದುವೆಯಾಗಿದ್ದರು.
ಒಂದು ಅಪಘಾತದ ನಂತರ ಅವರು ಆರು ತಿಂಗಳ ಕಾಲ ಮನೆಯಲ್ಲೇ ಇರಬೇಕಾಯಿತು. ಈ ಅವಧಿಯಲ್ಲಿ ಅವರು ಸಿನಿಮಾ ಅವಕಾಶಗಳನ್ನು ಕಳೆದುಕೊಂಡರು. ಪತ್ನಿ ಮತ್ತು ಮಗ ವಿದೇಶಕ್ಕೆ ತೆರಳಿದ್ದರಿಂದ ಅವರು ಸಂಪೂರ್ಣವಾಗಿ ಒಂಟಿಯಾದರು. ಜೀವನ ನಿರ್ವಹಣೆಗೆ ಹಣವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟವನ್ನೂ ಎದುರಿಸಿದರು.
2019ರಲ್ಲಿ ಮಹೇಶ್ ಆನಂದ್ ಅವರ ಸಾವು ಅತ್ಯಂತ ಭಯಾನಕವಾಗಿತ್ತು. ಮನೆಯ ಹೊರಗೆ ಟಿಫನ್ ಬಾಕ್ಸ್‌ಗಳು ಗುಡ್ಡೆಯಾಗಿದ್ದನ್ನು ಕಂಡು ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ, ಮಹೇಶ್ ಅವರ ಶವ ಸೋಫಾದ ಮೇಲೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಸತ್ತು ಕನಿಷ್ಠ ಎರಡು ದಿನಗಳಾಗಿದ್ದವು. ಅಷ್ಟು ದೊಡ್ಡ ನಟನ ಅಂತಿಮ ಸಂಸ್ಕಾರ ಮಾಡಲು ಒಬ್ಬರೇ ಒಬ್ಬರು ನೆಂಟರಿಷ್ಟರು ಜೊತೆಗಿರಲಿಲ್ಲ.

Post a Comment