ಪೆರ್ಡೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
![]() |
| ವಿದ್ಯಾರ್ಥಿಗಳು ತಂದೆ ತಾಯಿ ಶಿಕ್ಷಕರನ್ನು ಗೌರವಿಸಿ ,ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಿರಿ. |
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ( ರಿ ) ಉಡುಪಿ
ತಾಲೂಕು ಮತ್ತು ಜಿಲ್ಲಾ ಜನ ಜಾಗೃತಿ ವೇದಿಕೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ
ಪೆರ್ಡೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ
ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ
ಅಧ್ಯಕ್ಷರಾದ ಶೈಲಜಾ ರವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಕಾಲೇಜಿನ
ಪ್ರಾಂಶುಪಾಲರಾದ ಕೃಷ್ಣ ಎಸ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸಂತೋಷ್ ಹೆಡ್ ಕಾನ್ಸ್ಟೇಬಲ್, ಎಸ್. ಪಿ ಕಚೇರಿ ಉಡುಪಿ ಇವರು ದುಶ್ಚಟ ಮುಕ್ತ ಸಮಾಜಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡಬೇಕಾದ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಯುವ ಜನತೆ ಹೆಚ್ಚು ಮೊಬೈಲ್ ಮತ್ತು ಮಧ್ಯಪಾನ ಗಾಂಜಾ, ಡ್ರಕ್ಸ್ ಗಳ ಸೇವನೆಯಿಂದ ಹೆಚ್ಚು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ವಿಷಾದನೀಯ. ಆದ್ದರಿಂದ ಯುವಜನತೆ ಎಚ್ಚೆತ್ತುಕೊಂಡು ಇಂತಹ ದಾರಿಗೆ ಹೋಗದೆ ಉತ್ತಮ ಮಾರ್ಗದಲ್ಲಿ ನಡೆಯಲು ಈ ಮಾಹಿತಿ ಕಾರ್ಯಗಾರಗಳು ಅನುಕೂಲವಾಗಲಿದೆ, ಸೈಬರ್ ಕ್ರೈಂ ಗಳ ಬಗ್ಗೆ, ವಿದ್ಯಾರ್ಥಿ ಜೀವನದ ಗುರಿಯನ್ನು ಅರಿತುಕೊಳ್ಳುವುದು, ಹದಿಹರೆಯದ ಒತ್ತಡಗಳು, ಕರ್ತವ್ಯ ಪ್ರಜ್ಞೆ, ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನು ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಪೂರ್ಣಿಮಾ, ಕಾರ್ಯಕ್ರಮದ ನಿರೂಪಣೆಯನ್ನು ಸೇವಾಪ್ರತಿನಿಧಿ ಅಶೋಕ್ ನೆರವೇರಿಸಿದರು.


.jpeg)
.jpeg)
.jpeg)
Post a Comment