".

Header Ads

ಕಾಪು : ಟೈಯರ್ ಸ್ಫೋಟ, ಟೆಂಪೊ ಪಲ್ಟಿ

 


ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಟೆಂಪೊವೊಂದು ಪಲ್ಟಿಯಾದ ಘಟನೆ ಗುರುವಾರ (ಡಿ.4) ಎರ್ಮಾಲ್ ತೆಂಕದ ಬಳಿ ನಡೆದಿದೆ.

ಕೋಟೇಶ್ವರಿಂದ ಪಡುಬಿದ್ರೆಗೆ ಅಕ್ಕಿ ತುಂಬಿಸಿಕೊಂಡು ಹೋಗುತ್ತಿರುವಾಗ ಈ ದುರಂತ ನಡೆದಿದೆ.

ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ, ಆಪತ್ಭಾಂಧವ ಖ್ಯಾತಿಯ ಸಮಾಜ ಸೇವಕ ಜಲಾಲುದ್ದೀನ್ ಜಲ್ಲು ಉಚ್ಚಿಲ, ಜುನೈದ್ ಎರ್ಮಾಲ್, ಹಮೀದ್ ಉಚ್ಚಿಲ, ಎಸ್.ಡಿ.ಪಿ.ಐ. ಉಚ್ಚಿಲ ಆಂಬುಲೆನ್ಸ್ ಚಾಲಕ ಅಬೂಬಕರ್ ಸಿದ್ದೀಕ್ ಹಾಗೂ ಎರ್ಮಾಲ್ ರಿಕ್ಷಾ ಚಾಲಕರ ಸಹಕಾರದೊಂದಿಗೆ ಟೆಂಪೋದಲ್ಲಿದ್ದ ಅಕ್ಕಿಯನ್ನು ಸುರಕ್ಷಿತವಾಗಿ ಖಾಲಿ ಮಾಡಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.ಎನ್.ಎಚ್.ಎ.ಐ. ಸಿಬ್ಬಂದಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಕೂಡ ಕಾರ್ಯದಲ್ಲಿ ಸಹಕರಿಸಿದ್ದರು.

Powered by Blogger.