".

Header Ads

ಉಡುಪಿ – ವಾಟ್ಸಾಪ್ ನಲ್ಲಿ ಬಂದ ನಕಲಿ ಷೇರು ಮಾರುಕಟ್ಟೆ ಮೆಸೇಜ್ ನಂಬಿ 1.5 ಲಕ್ಷ ಕಳೆದುಕೊಂಡ ಯುವಕ

  ವಾಟ್ಸಾಫ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಹಾಕಿದ ನಕಲಿ ಷೇರು ಮಾರುಕಟ್ಟೆ ಮೆಸೇಜ್ ಗಳನ್ನು ನಂಬಿ ಯುವಕನೊಬ್ಬ 160000 ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.ಕಿನ್ನಿಮೂಲ್ಕಿಯ ನಿವಾಸಿ ಯುವಕನಿಗೆ ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್‌ನಲ್ಲಿ ಪರಿಚಯವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದನು.
ಇದನ್ನು ನಂಬಿದ ಯುವಕ ಜ. 13ರಂದು ತಂದೆಯ ಖಾತೆಯಿಂದ 1 ಲ.ರೂ. ಹಾಗೂ ತನ್ನ ಖಾತೆಯಿಂದ 60,000 ರೂ. ಸಹಿತ ಒಟ್ಟು 1,60,000 ರೂ.ಗಳನ್ನು ವರ್ಗಾಯಿಸಿದ್ದರು. ಆದರೆ ಆರೋಪಿಗಳು ಈವರೆಗೂ ಯಾವುದೇ ಲಾಭದ ಹಣವನ್ನು ವಾಪಸು ನೀಡದೇ ಹಾಗೂ ಹೂಡಿಕೆ ಮಾಡಿದ ಹಣವನ್ನೂ ನೀಡದೆ ಮೋಸ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Powered by Blogger.