".

Header Ads

ಉಡುಪಿ ಪರ್ಯಾಯೋತ್ಸವ - ಜ17 ಬೆಳಿಗ್ಗೆ 10 ಗಂಟೆಯಿಂದ 18 ಬೆಳಿಗ್ಗೆ 6 ವರೆಗೆ ಮದ್ಯ ಮಾರಾಟ ನಿಷೇಧ

 

ಶ್ರೀಕೃಷ್ಣ ಮಠದಲ್ಲಿ ಶ್ರೀ ಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀ ಪಾದರವರ ಪರ್ಯಾಯ ಉತ್ಸವದ ಹಿನ್ನೆಲೆಯಲ್ಲಿ ಜ.17ರ ಬೆಳಿಗ್ಗೆ 10 ರಿಂದ ಜ.18 ರ ಬೆಳಿಗ್ಗೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪರ್ಯಾಯೋತ್ಸವದಲ್ಲಿ ಅಷ್ಟಮಠಗಳ ಯತಿಗಳು ಅಲ್ಲದೇ ಗಣ್ಯ, ಅತೀ ಗಣ್ಯ ವ್ಯಕ್ತಿಗಳು ಇತರ ಮಠಾಧೀಶರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು/ಭಕ್ತಾದಿಗಳು ಭಾಗವಹಿಸುತ್ತಿದ್ದು,  ಕಾನೂನು ಪರಿಪಾಲನೆ ಮಾಡುವ ಉದ್ದೇಶದಿಂದ ಜ17 ಬೆಳಿಗ್ಗೆ 10 ಗಂಟೆಯಿಂದ 18 ಬೆಳಿಗ್ಗೆ 6 ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಹಿರೇಬೆಟ್ಟು, ಅಂಬಲಪಾಡಿ, ಕುತ್ಪಾಡಿ, ಕಡೆಕಾರು, ಕಿದಿಯೂರು, ಮೂಡುತೋನ್ನೆ ಹಾಗೂ ಪಡುತೋನ್ನೆ ಗ್ರಾಮ ವ್ಯಾಪ್ತಿಯಲ್ಲಿ (10-15 ಕಿ.ಮೀ) ತನಕ ಮದ್ಯಪಾನ ಮಾರಾಟ ನಿಷೇಧಿಸಿ ಆದೇಶ ಮಾಡಲಾಗಿದೆ.

Powered by Blogger.