".

Header Ads

ಕಾರ್ಕಳ:-ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಪೋಟ: ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ಭಸ್ಮ

 


ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುದ್ದಣ್ಣನಗರ ಎಂಬಲ್ಲಿನ ನಿವಾಸಿ ವಾರಿಜಾ ಶೆಟ್ಟಿಗಾರ್ ಎಂಬವರ ಮನೆಯಲ್ಲಿ ಗುರುವಾರ ತಡರಾತ್ರಿ 1.30ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ.
ಮನೆಯ ಮಂದಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಏಕಾಎಕಿ ಸಿಲಿಂಡರ್ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ ಮನೆಯ ಗೋಡೆ ಹಾಗೂ ವಿದ್ಯುತ್ ಉಪಕರಣಗಳು ಸೇರಿ ಸುಮಾರು2 ಲಕ್ಷ ರೂ. ನಷ್ಟ ಸಂಭವಿಸಿದೆ. ಅಡುಗೆ ಕೋಣೆ ಪ್ರತ್ಯೇಕ ಇದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಮೂಲಕ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಿದ್ದಾರೆ

Powered by Blogger.