".

Header Ads

ಮುಂಬೈ : 30 ವರ್ಷಗಳ ಭದ್ರಕೋಟೆ ಛಿದ್ರ ಮಾಡಿದ ಬಿಜೆಪಿ ,ಶಿವಸೇನೆ

 


ಬಾಳಾ ಠಾಕ್ರೆ  ಎಂಬ ಬಲಭೀಮ ಕಟ್ಟಿದ್ದ ಬಲಿಷ್ಠ ಕೋಟೆ,  ಕನಸು ಮನಸ್ಸಲ್ಲೂ ಕಾಂಗ್ರೆಸ್ ಜೊತೆ ಕೈಕುಲುಕೋದಿಲ್ಲ ಎಂದು ಸೀನಿಯರ್ ಠಾಕ್ರೆ ಗುಡುಗಿದ್ದರು. ಆದ್ರೆ, ಉದ್ಧವ್ ಠಾಕ್ರೆ  ಅದೇ ಕಾಂಗ್ರೆಸ್ ಜೊತೆಗೂಡಿದ್ರು. 
ಮುಸ್ಲಿಮರ ಮತ ಕೇಳತೊಡಗಿದರು. ಮಾಡಿದ ತಪ್ಪಿಗೆ ಮುಂಬೈ   ಕೂಡಾ ಠಾಕ್ರೆಗಳ ಕೈ ತಪ್ಪಿದೆ.

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಮುಂಬೈನಲ್ಲಿ ಕೇಸರಿ ಸೇನೆ ಅಕ್ಷರಶಃ ಆರ್ಭಟಿಸಿದೆ. ಠಾಕ್ರೆಗಳ ಕೋಟೆಯನ್ನು ಬಿಜೆಪಿ  , ಶಿವಸೇನೆ  ಸೇರಿ ಛಿದ್ರ ಛಿದ್ರ ಮಾಡಿವೆ.

ಬರೋಬ್ಬರಿ ಸುಮಾರು ಮೂರು ದಶಕಗಳ ನಂತರ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆ ಪ್ರಾಬಲ್ಯ ಅಂತ್ಯವಾಗಿದೆ. ದೇವೆಂದ್ರ ಫಡ್ನವೀಸ್ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಮೈತ್ರಿಕೂಟವು ಸ್ಪಷ್ಟ ಗೆಲುವು ಸಾಧಿಸಿ, ಅಧಿಕಾರದ ಗದ್ದುಗೆಗೇರಿದೆ. ಇನ್ಮುಂದೆ ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬಿಎಂಸಿಯನ್ನು ಬಿಜೆಪಿ ಆಳಲಿದೆ.

BMC ಚುನಾವಣೆ ಫಲಿತಾಂಶ: 227 ಸದಸ್ಯ ಬಲದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಶಿವಸೇನೆ ಮೈತ್ರಿಕೂಟ 129 ಸ್ಥಾನ ಗೆದ್ದು ಪಟ್ಟಕ್ಕೇರಿದೆ. ಉದ್ಧವ್ ಠಾಕ್ರೆಯ ಶಿವಸೇನೆ, ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸಮಿತಿ ಮೈತ್ರಿ ಕೂಟ ಕೇವಲ 72 ಸೀಟ್ ಗೆದ್ದಿದೆ. ಕಾಂಗ್ರೆಸ್ ದೋಸ್ತಿಗಳು 15 ಸ್ಥಾನ, ಇತರರು 11 ಸ್ಥಾನಕ್ಕೆ ತೃಪ್ತಿಪಟ್ರು.

ಬಿಜೆಪಿ ಭರ್ಜರಿ ಮುನ್ನಡೆಗೆ ಕಾರಣವೇನು?: ಉದ್ಧವ್ ಠಾಕ್ರೆಯವರ ಶಿವಸೇನೆಯ ಒಳಬಿರುಕುಗಳೇ ಬಿಜೆಪಿಗೆ ಅತಿದೊಡ್ಡ ಪ್ಲಸ್ ಪಾಯಿಂಟ್ ಆಗಿವೆ. ಉದ್ಧವ್-ಶಿಂಧೆ ಬಣ ಸಂಘರ್ಷದಿಂದಾಗಿ ಶಿವಸೇನೆಯ ಸಾಂಪ್ರದಾಯಿಕ ಮತಬ್ಯಾಂಕ್ ವಿಭಜನೆಯಾಗಿದೆ. ಆಡಳಿತ ವಿರೋಧಿ ಅಲೆ ಇದ್ದರೂ ಅದು ಬಿಜೆಪಿ ವಿರುದ್ಧ ಪ್ರಬಲವಾಗಿ ಕೆಲಸ ಮಾಡಲಿಲ್ಲ, ಬದಲಾಗಿ ಅದರ ಬಹುಪಾಲು ಹೊರೆ ಉದ್ಧವ್ ಠಾಕ್ರೆ ಬಣದ ಮೇಲೆಯೇ ಬಿದ್ದಿದೆ.

ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಮರಾಠಿ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೆಸರಿನಲ್ಲಿ ವಿಭಿನ್ನ ತಂತ್ರಗಳನ್ನು ಅನುಸರಿಸಿದರೂ, ಮತದಾರರನ್ನು ಒಗ್ಗೂಡಿಸುವಲ್ಲಿ ಇಬ್ಬರೂ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಅಜಿತ್ ದಾದಾಗಿರಿಗೂ ಬಿಜೆಪಿ-ಶಿವಸೇನೆ ಬ್ರೇಕ್!: ಪುಣೆ ಮಹಾನಗರ ಪಾಲಿಕೆಯಲ್ಲಿ ಆಘಾತಕಾರಿ ಫಲಿತಾಂಶಗಳು ಹೊರಬಂದಿದೆ. ಬಿಜೆಪಿ ಪ್ರಬಲ ಪುನರಾಗಮನ ಮಾಡಿದೆ. ಪುಣೆ ಮಹಾನಗರ ಪಾಲಿಕೆ ಫಲಿತಾಂಶಗಳಲ್ಲಿ, ಅಜಿತ್‌ ದಾದಾ ವಿರುದ್ಧ ಫಡ್ನವೀಸ್ ಪಡೆ ಗೆದ್ದು ಬೀಗಿದೆ.

ಪುಣೆ ಚುನಾವಣೆ ಫಲಿತಾಂಶ: ಪುಣೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿನ ಕಮಾಲ್ ಮಾಡಿದೆ. ಬಿಜೆಪಿ-ಶಿವಸೇನೆ ಸೇರಿ 90 ಸೀಟ್ ಗೆದ್ದರೆ, ಎನ್​ಸಿಪಿ ಮಿತ್ರಕೂಟ 20, ಉದ್ಧವ್ ಶಿವಸೇನೆ, ಕಾಂಗ್ರೆಸ್​ ಸೇರಿ 10 ಸೀಟ್ ಗೆದ್ದಿವೆ.

ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಭರ್ಜರಿ ಗೆಲುವು!: 2017ರಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್, ಮಹಾರಾಷ್ಟ್ರದ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದಾನೆ.


 

Powered by Blogger.