50 ಸಾವಿರ ರೂಪಾಯಿ ಲೋನ್ ಗೆ 2 ಲಕ್ಷ ಕಳೆದುಕೊಂಡ ವ್ಯಕ್ತಿ
ಮೊಬೈಲ್ ಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಸಾಲ ನೀಡುತ್ತಾರೆ ಎಂಬ ಮಾತು ನಂಬಿ ವ್ಯಕ್ತಿಯೊಬ್ಬ 2 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ.
2025 ನೇ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ಯಾರೋ ಅಪರಿಚಿತ ವ್ಯಕ್ತಿ ವಾಟ್ಸ ಆಪ್ ನಂಬ್ರ: 9990357883 ನೇದರಿಂದ ವಾಟ್ಸ್ ಆಪ್ ಸಂದೇಶ ಕಳುಹಿಸಿ JAYAPRAKSH FINANCE, ಇಂದಿರಾನಗರ, ಬೆಂಗಳೂರು ನಿಂದ ಎಂಬುದಾಗಿ ಪರಿಚಯಿಸಿಕೊಂಡು ನಂತರ ಪಿರ್ಯಾದಿದಾರರಿಗೆ 50,000/- ರೂ ವೈಯಕ್ತಿಕ ಸಾಲವನ್ನು ಶೀಘ್ರವಾಗಿ ನೀಡುವುದಾಗಿ ಕರೆ ಮಾಡಿ ತಿಳಿಸಿರುತ್ತಾರೆ.
ಬಳಿಕ ಕೃತಿಕಾ ಎಂಬ ಮಹಿಳೆಯು ಮಾತನಾಡಿ ಶೀಘ್ರವಾಗಿ ಪಿರ್ಯಾದಿದಾರ ಬ್ಯಾಂಕ್ ಖಾತೆಗೆ ಸಾಲ ಮಂಜೂರು ಮಾಡುವುದಾಗಿ ತಿಳಿರುತ್ತಾರೆ ಹಾಗೂ ಸದ್ರಿ ಕಂಪನಿಯ ಮೆನೇಜರ್ ಶ್ರೀ ವಾತ್ಸವ್ ಎಂಬುದಾಗಿದ್ದು, ಸದ್ರಿಯವರ ಮೊಬೈಲ್ ನಂಬ್ರ:8587019084 ಆಗಿರುತ್ತದೆ. ಅದರಂತೆ ಪಿರ್ಯಾದಿದಾರರಿಗೆ ಸಾಲದ ಅಗತ್ಯವಿದ್ದ ಕಾರಣ ಸದ್ರಿಯವರಲ್ಲಿ 50,000/- ರೂ ಹಣ ಸಾಲ ನೀಡುವಂತೆ ಕೋರಿಕೊಂಡಾಗ ಸದ್ರಿಯವರು ಬೇರೆ ಬೇರೆ ರೀತಿಯ ಪ್ರೋಸೆಸ್ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿರುತ್ತಾರೆ.ಅದರಂತೆ ದಿನಾಂಕ:08-09-2025 ರಿಂದ 23-10-2025 ರವರೆಗೆ ಸದ್ರಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಗೂಗಲ್ ಪೇ ನಂಬ್ರಗಳಿಗೆ UPI ಮುಖಾಂತರ ತನ್ನ ಬಾಬ್ತು ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಖಾತೆಯಿಂದ ಹಂತ ಹಂತವಾಗಿ ಒಟ್ಟು 2,15,000/- ರೂಗಳನ್ನು ವರ್ಗಾಯಿಸಿರುತ್ತಾರೆ. ನಂತರದ ದಿನಗಳನ್ನು ಪಿರ್ಯಾದಿದಾರರು ಅವರಲ್ಲಿ ಸಾಲದ ಹಣ ಮಂಜೂರು ಮಾಡುವಂತೆ ಕೋರಿಕೊಂಡಾಗ ಇನ್ನೂ ಹೆಚ್ಚಿನ ಶುಲ್ಕಗಳನ್ನು ಪಾವತಿ ಮಾಡುವಂತೆ ತಿಳಿಸಿರುತ್ತಾರೆ. ಆದರೆ ಪಿರ್ಯಾದಿದಾರರಲ್ಲಿ ಹೆಚ್ಚಿನ ಹಣವಿಲ್ಲದ ಕಾರಣ ತಾನು ಪಾವತಿಸಿದ ಹಣವನ್ನು ವಾಪಾಸು ನೀಡುವಂತೆ ಕೇಳಿರುತ್ತಾರೆ. ಸದ್ರಿ ಅಪರಿಚಿತ ವ್ಯಕ್ತಿಗಳು ಯಾವುದೇ ಸಾಲವನ್ನು ನೀಡದೇ ಮತ್ತು ಪಿರ್ಯಾದಿದಾರರು ಪಾವತಿಸಿದ ಹಣವನ್ನು ವಾಪಾಸು ನೀಡದೇ ಆನ್ ಲೈನ್ ಮೋಸ ವಂಚನೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ದೂರಿನ ಸಾರಾಂಶ. ಪಿರ್ಯಾದಿದಾರರು ಇದೂವರೆಗೆ ಸಾಲದ ಹಣ ವಾಪಾಸು ದೊರಕಬಹುದೆಂದು ಕಾಯುತಲಿದ್ದು ಯಾವುದೇ ಹಣ ದೊರೆಯದ ಕಾರಣ ಪ್ರಕರಣ ದಾಖಲಿಸಿದ್ದಾರೆ.
Post a Comment