ಬಸ್ ಬ್ರೇಕ್ ಫೇಲ್ - ತಪ್ಪಿದ ಅನಾಹುತ
ಬಸ್ ಬ್ರೇಕ್ ವೈಫಲ್ಯಗೊಂಡರೂ ಅದೃಷ್ಟವಶಾತ್ ಯಾವುದೇ ಅಪಾಯವಾಗದೆ ಸುರಕ್ಷಿತವಾಗಿ ಆಗಿ ನಿಂತ ಘಟನೆ ಬಂಟ್ವಾಳದ ಬಿ.ಸಿ.ರೋಡಿನಲ್ಲಿ ನಡೆದಿದೆ.ಮಂಗಳೂರಿನಿಂದ ಪುತ್ತೂರು ಕಡೆಗೆ ಸಂಚಾರ ಮಾಡುತ್ತಿದ್ದ ಬಸ್ ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯಲ್ಲಿ ಬ್ರೇಕ್ ವೈಫಲ್ಯಗೊಂಡು ಯಾವುದೇ ಅಪಾಯವಿಲ್ಲದೆ ನಿಂತಿದೆ. ಬ್ರೇಕ್ ವೈಫಲ್ಯಗೊಂಡ ಬಸ್ ಅಡ್ಡಾದಿಡ್ಡಿ ಸಂಚರಿಸಿ, ಬಸ್ ಹಾಗೂ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಬಳಿಕ ನಿಂತಿದೆ. ಅದೃಷ್ಟವಶಾತ್ ಸ್ಕೂಟರ್ ಸವಾರ ವಾಹನದಿಂದ ಹಾರಿದ ಕಾರಣಕ್ಕಾಗಿ ಆತನ ಜೀವ ಉಳಿದುಕೊಂಡಿದೆ. ಘಟನೆಯಿಂದ ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯುಂಟಾಗಿದೆ.

Post a Comment