ಡೆಂಟಲ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!
ವರ್ಷದ ಯಶಸ್ವಿನಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಬೊಮ್ಮನಹಳ್ಳಿತ ಪ್ರತಿಷ್ಠಿತ ಖಾಸಗಿ ಡೇಂಟಲ್ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಯಶಸ್ವಿನಿ ವ್ಯಾಸಂಗ ಮಾಡುತ್ತಿದ್ದಳು. ಸೆಮಿನಾರ್ ಗೆ ಅವಕಾಶ ನೀಡದೇ ರೆಡಿಯಾಲಜಿ ಕೇಸ್ ಕೂಡ ನೀಡದೇ ವಿದ್ಯಾರ್ಥಿನಿಗೆ ಕಾಲೇಜಿನಲ್ಲಿ ಕಿರುಕುಳ ನೀಡಿ ಅವಮಾನಿಸಲಾಗಿದೆ. ಕಣ್ಣು ನೋವಿನ ಕಾರಣಕ್ಕೆ ಯಶಸ್ವಿನಿ ಬುಧವಾರ ಕಾಲೇಜಿಗೆ ಹೋಗಿರಲಿಲ್ಲ. ಗುರುವಾರ ಕಾಲೇಜಿಗೆ ಆಕೆ ಹೋದಾಗ ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿದೆ? ಪೂರ್ಟಿ ಬಾಟಲ್ ಹಾಕಿಕೊಂಡ್ಯಾ? ಎಂದು ಅನಗತ್ಯ ಪ್ರಶ್ನೆ ಮಾಡಿ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರು ಅವಮಾನಿಸಿದ್ದರು. ಪ್ರಾಧ್ಯಾಪಕರ ಮಾತಿನಿಂದ ತೀವ್ರವಾಗಿ ನೊಂದಿದ್ದ ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

Post a Comment