".

Header Ads

ಪ್ರಜ್ಞೆ ತಪ್ಪುವ ಮುನ್ನ ಪ್ರಜ್ಞಾವಂತರಾಗಿ :ಕಾರ್ಕಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪೆರ್ವಾಜೆ ಶಾಲಾ ಮಕ್ಕಳಿಗೆ ಮಾಹಿತಿ ಕಾರ್ಯಕ್ರಮ


ಶಾಲೆ ಎಂಬುದು ಕೇವಲ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಪರಸ್ಪರ ಬಲವಾದ ಮತ್ತು ವಿಶ್ವಾಸಾರ್ಹ ಸಂಬಂಧಕ್ಕೆ ಅಡಿಪಾಯವಾಗಿದೆ. ವಿದ್ಯಾರ್ಥಿಗಳಿಗೆ ಭಾವನಾತ್ಮಕ ಬೆಂಬಲ ,ಸುರಕ್ಷಿತ ಕಲಿಕೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ವಿದ್ಯಾರ್ಥಿಗಳ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ  ವ್ಯಾಪಕವಾಗಿ ಹರಡುತ್ತಿರುವ ಸೈಬರ್ ಅಪರಾಧಗಳು ಮತ್ತು ಅದರ ತಡೆ ಹಾಗೂ ಪೋಕ್ಸೋ ಕಾಯ್ದೆ ಮಾದಕ ವ್ಯಸನದ ದುಷ್ಪರಿನಾಮ. ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸು ವ ಕುರಿತು ಬ ಗ್ಗೆ ವಿವರವಾಗಿ ಮಕ್ಕಳು ಮನ ಮುಟ್ಟುವಂತೆ ಕಾರ್ಕಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪೆರ್ವಾಜೆ ಇಲ್ಲಿನ ಶಾಲಾ ಮಕ್ಕಳಿಗೆ ಮಾಹಿತಿಯನ್ನು  ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಪೊಲೀಸ್ ಸಿಬ್ಬಂದಿ  ಸಂತೋಷ್ ಕಾರ್ಕಳರವರು ನೀಡಿರುತ್ತಾರೆ. 

ಅಂತರಾಷ್ಟ್ರೀಯ ಸಂಸ್ಥೆ JC ಇದರ  ಪೂರ್ವಾಧ್ಯಕ್ಷೆ ಹಾಗೂ ಎಸ್ ಡಿ ಎಂ ಸಿ ಸಮನ್ವಯ ಸಮಿತಿ ಕಾರ್ಕಳ ತಾಲೂಕು ಇದರ ಅಧ್ಯಕ್ಷರಾಗಿರುವ ಶ್ರೀಮತಿ ವೀಣಾ ಭ0ಡಾರಿಯವರು ಮಾತನಾಡಿ ವಿದ್ಯಾರ್ಥಿಗಳು ನೈತಿಕ ಮೌಲ್ಯವನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಪೆರ್ವಾಜೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ರವಿಕಾಂತ್ ಶೆಣೈ ಇವರು ಉಪಸ್ಥಿತರಿದ್ದರು .







ಪ್ರಭಾರ ಮುಖ್ಯ ಶಿಕ್ಷಕಿ  ಶ್ರೀಮತಿ ಸಪ್ನಾ ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಹ ಶಿಕ್ಷಕಿ ಶ್ರೀಮತಿ ರೇವತಿಯವರು ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲರಿಗೂ ವಂದಿಸಿದರು. ಸಹ ಶಿಕ್ಷಕಿ  ಶ್ರೀಮತಿ ಪ್ರಸಾದಿನಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Powered by Blogger.