ಗಾಳಿಪಟದ ಮಾಂಜಾದಾರ ತಂದ ಕುತ್ತು; ಕುತ್ತಿಗೆಗೆ ದಾರ ಸಿಲುಕಿ ಸ್ಥಳದಲ್ಲೇ ವ್ಯಕ್ತಿ ಸಾವು
ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಗಿ ಗ್ರಾಮದಲ್ಲಿನ ಬಂಬಳಗಿ ನಿವಾಸಿ ಸಂಜುಕುಮಾರ್ ಹೊಸಮನಿ(48) ಸಾವನ್ನಪ್ಪಿದ್ದಾರೆ.ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಸಂಜುಕುಮಾರ್ ಸ್ಥಳೀಯ ಹಾಸ್ಟೆಲ್‌ನಿಂದ ತನ್ನ ಮಗಳನ್ನು ಕರೆತರಲು ತೆರಳುತ್ತಿದ್ದಾಗ ಅವಘಡ ನಡೆದಿದೆ.ಸುಮಾರು 11 ಗಂಟೆ ಹೊತ್ತಿಗೆ ಮೋಟರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಳಮಡಗಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ಮಾಂಜಾ ದಾರ ಸಂಜುಕುಮಾರ್ ಹೊಸಮನಿ ಕುತ್ತಿಗೆಗೆ ಸುತ್ತಿಕೊಂಡಿದೆ.ಈ ವೇಳೆ ಅರ್ಧ ಕುತ್ತಿಗೆ ಕಟ್ಟಾದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಬೈಕ್ನಿಂದ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ.

Post a Comment