ಪುತ್ತೂರು – ಮುಂದುವರೆದ ವೃದ್ದ ದಂಪತಿಗಳ ಅಹೋರಾತ್ರಿ ಧರಣಿ
ಪುತ್ತೂರಿನಲ್ಲಿ ಇತ್ತೀಚೆಗೆ ಮನೆ ಕಳೆದುಕೊಂಡ ವೃದ್ಧ ದಂಪತಿಯೊಬ್ಬರು ನ್ಯಾಯಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು,. ಇದು ಆರನೇ ದಿನಕ್ಕೆ ಕಾಲಿಟ್ಟಿದೆ. ಪುತ್ತೂರು ಸಹಾಯ ಆಯುಕ್ತರು ತನಿಖೆ ನಡೆಸಿ ಕ್ರಮಕೈಗೊಳ್ಳುವ ಬಗ್ಗೆ ಆಶ್ವಾಸನೆ ನೀಡಿದ್ದರೂ, ದಂಪತಿಗಳು ಧರಣಿಯನ್ನು ಮುಂದುವರೆಸಿದ್ದಾರೆ.
ಮನೆ ಕಳೆದುಕೊಂಡ ಕೌಕ್ರಾಡಿ ಗ್ರಾ.ಪಂ ವ್ಯಾಪ್ತಿಯ ಕಾಪಿನ ಬಾಗಿಲು ನಿವಾಸಿ ರಾಧಾಮ್ಮ, ಮುತ್ತು ಸ್ವಾಮಿ ದಂಪತಿ ತಮಗೆ ನ್ಯಾಯ ಕೊಡಿಸುವಂತೆ ನೀತಿ ತಂಡದ ನೇತೃತ್ವದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಆವರಣದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂದುವರೆಸಿದ್ದು, ಆರನೇ ದಿನಕ್ಕೆ ವೃದ್ಧ ದಂಪತಿಗಳ ಆಹೋರಾತ್ರಿ ಧರಣಿ ಮುಂದುವರೆದಿದೆ.
ಮನೆ ಕೆಡವಿದ ಕಡಬ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದ್ದು, ಅಕ್ರಮವಾಗಿ ತಮ್ಮ ಮನೆ ಕೆಡವಿ ಹಾಕಿದ್ದಾರೆ ಎಂದು ಆರೋಪಿಸಿ ದಂಪತಿಗಳು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಪುತ್ತೂರು ಸಹಾಯಕ ಆಯುಕ್ತೆ ಸ್ಟೇಲ್ಲಾ ವರ್ಗಿಸ್ ಅವರು ಧರಣಿ ನಿರತರನ್ನು ಭೇಟಿ ಮಾಡಿ ಹದಿನೈದು ದಿನಗಳ ಸಮಯಾವಕಾಶ ಕೇಳಿದ್ದರು. ಸದ್ಯ ಧರಣಿ ಮುಂದುವರೆಸಿರುವ ದಂಪತಿಗಳು ತನಿಖೆಯಲ್ಲೂ ನ್ಯಾಯ ದೊರಕದಿದ್ದಲ್ಲಿ ಅನ್ನ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Post a Comment