ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ(34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು.
ಹರೀಶ್ ಅವರು ತನ್ನ ತಾಯಿ, ಪತ್ನಿ, ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮನೆಯವರೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿ ಮಲಗಿದ್ದ ಮಧುಶ್ರೀ ಅವರು ರವಿವಾರ ಬೆಳಗ್ಗೆ ಮಗು ಸಹಿತ ಕಾಣದೇ ಇದ್ದ ಸಂದರ್ಭದಲ್ಲಿ ಮನೆಯವರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದುಈ ವೇಳೆ ಮನೆ ಸಮೀಪದ ಇನ್ನೊಬ್ಬರ ಜಾಗದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ.
ಮಧುಶ್ರೀ ಅವರು ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾದ ಮಧುಶ್ರೀ ಅವರು ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
Post a Comment