ಕಿನ್ನಿಮೂಲ್ಕಿ : ಕುಳಿತಲ್ಲಿಯೇ ಹೋಂ ನಸ್೯ ಮೃತ್ಯು
ಕುರ್ಚಿಯ ಮೇಲೆ ಕೂತಲ್ಲಿಯೇ ಹೋಮ್ ನರ್ಸೊಬ್ಬರು ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಗರಡಿರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಹೊಮ್ ನರ್ಸ್ ಪ್ರದೀಪ್ ಅಜ್ಜರಕಾಡು (55) ಎಂದು ಗುರುತಿಸಲಾಗಿದೆ.
ಇವರು ತನ್ನ ಬಾಡಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಇದೇ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ರೆನ್ನಲಾಗಿದೆ.
ತಕ್ಷಣ ತಾಳಿಯರು ನೀಡಿದ ಮಾಹಿತಿಯಂತೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಪ್ರದೀಪ್ ಅವರನ್ನು ಆಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಪರಿಕ್ಷೀಸಿದ ವೈದ್ಯರಿಂದ ಪ್ರದೀಪ್ ಮೃತಪಟ್ಟಿರುವುದಾ ಗಿ ತಿಳಿಸಿದರು. ಮೃತ ವ್ಯಕ್ತಿ ಸಮಾಜಮುಖಿಯಾಗಿದ್ದು, ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೇತ್ರತ್ವ ನಡೆಯುವ ಅನಾಥ ಶವಗಳ ಅಂತ್ಯಸಂಸ್ಕಾರ ನೇರವೆರಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರು.
Post a Comment