".

Header Ads

ಉಡುಪಿ:ಯೂಟ್ಯೂಬ್ ನೋಡಿ ನಕಲಿ ಆನ್‌ಲೈನ್ ಟ್ರೇಡಿಂಗ್ ಆ್ಯಪ್ ಡೌನ್ ಲೋಡ್ – 11.75 ಲಕ್ಷ ವಂಚನೆ

 ಯೂಟ್ಯೂಬ್ ವೀಡಿಯೋ ಮತ್ತು ವಾಟ್ಸಾಪ್ ಗ್ರೂಪ್‌ಗಳ ಮೂಲಕ ಆನ್‌ಲೈನ್ ಟ್ರೇಡಿಂಗ್ ಆಮಿಷವೊಡ್ಡಿ ಉಡುಪಿಯ ಮಹಿಳೆಯೊಬ್ಬರಿಗೆ ಬರೋಬ್ಬರಿ ₹11.75 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆ ಸಹನಾ ಅವರು ಯೂಟ್ಯೂಬ್‌ನಲ್ಲಿ ‘Amar Ujala Bonus’ ಎಂಬ ಟ್ರೇಡಿಂಗ್ ವೀಡಿಯೋ ನೋಡಿ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಇದಾದ 15 ದಿನಗಳ ನಂತರ ಅವರನ್ನು ‘A20 Stock Market Profit Guide’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಅದರಲ್ಲಿ ಟ್ರೇಡಿಂಗ್ ತರಗತಿಗಳನ್ನು ನಡೆಸಿ, ನಂತರ ‘SALT CAP’ ಎಂಬ ಆಪ್ ಡೌನ್‌ಲೋಡ್ ಮಾಡಿಸಿ ಕೆವೈಸಿ ವಿವರಗಳನ್ನು ಪಡೆದುಕೊಳ್ಳಲಾಗಿತ್ತು.

 

ಹಂತ ಹಂತವಾಗಿ ಹಣ ವರ್ಗಾವಣೆ: ಆರೋಪಿಗಳ ಸೂಚನೆಯಂತೆ ಸಹನಾ ಅವರು ಮಾರ್ಚ್ 6ರಿಂದ ಮಾರ್ಚ್ 14ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹11,75,000 ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ, ವರ್ಗಾವಣೆ ಮಾಡಿದ ಅಸಲು ಹಣವಾಗಲಿ ಅಥವಾ ಲಾಭಾಂಶವಾಗಲಿ ಮರಳಿ ನೀಡದೆ ಆರೋಪಿಗಳು ವಂಚಿಸಿದ್ದಾರೆ. ಈ ಬಗ್ಗೆ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Powered by Blogger.