".

Header Ads

ನದಿಗೆ ಉರುಳಿದ ಬಸ್‌ – 23 ಜನ ಸಾವು, ಹಲವರು ನಾಪತ್ತೆ

 


ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಾರಿಗೆ ಬೋಟ್‌ ಏರುವ ವೇಳೆ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದ ರಾಜಧಾನಿಯಲ್ಲಿ ನಡೆದಿದೆ.ಬುಧವಾರ ಸಂಜೆ 5:15 ಗಂಟೆ ಸುಮಾರಿಗೆ ನೈಋತ್ಯ ಜಿಲ್ಲೆ ರಾಜ್‌ಬರಿಯಿಂದ ಪ್ರಯಾಣಿಸುತ್ತಿದ್ದ ಬಸ್ ಸಾರಿಗೆ ಬೋಟ್‌ ಏರುವಾಗ ಅಪಘಾತ ಸಂಭವಿಸಿದೆ. ಹಲವಾರು ಪ್ರಯಾಣಿಕರು ಬಸ್‌ ಕಿಟಕಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಬಹುತೇಕರು ಒಳಗಡೆಯೇ ಲಾಕ್‌ ಆಗಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ.ಬಸ್‌ ಸಾರಿಗೆ ಬೋಟ್‌ ಏರುತ್ತಿದ್ದಾಗ ʻಪದ್ಮಾʼ ನದಿಗೆ ಬಿದ್ದಿದೆ. ಈವರೆಗೆ 23 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಘಟನೆ ಬಳಿಕ ಸಾಲ್ವೆಜ್‌ ಬೋಟ್‌ನಲ್ಲಿದ್ದ ಕ್ರೇನ್‌ಗಳನ್ನ ಬಳಸಿಕೊಂಡು ಬಸ್‌ ಅನ್ನು ಹೊರತೆಗೆಯಲಾಯಿತು. ಇದಾದ ಬಳಿಕ ಬುಧವಾರ ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು (ಗುರುವಾರ) ಮತ್ತೆ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ ಸೇವೆ, ನೌಕಾಪಡೆ, ಪೊಲೀಸ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿವೆ ಎಂದು ಇನ್ಸ್‌ಪೆಕ್ಟರ್ ರಸೆಲ್ ಮೊಲ್ಲಾ ಹೇಳಿದ್ದಾರೆ.

Powered by Blogger.