".

Header Ads

ಉಡುಪಿ: ಟ್ರೇಡಿಂಗ್ ಹೆಸರಲ್ಲಿ ಭಾರಿ ವಂಚನೆ; ಹೂಡಿಕೆದಾರನಿಗೆ ₹57.70 ಲಕ್ಷ ನಾಮ!

 ಅಂತರರಾಷ್ಟ್ರೀಯ ಎಐ ಟ್ರೇಡಿಂಗ್ (AI Trading) ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಉಡುಪಿಯ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹57,70,945 ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಅನಿಲ್ ಅವರು ಫೇಸ್‌ಬುಕ್‌ನಲ್ಲಿ ಕಂಡ ವಿಡಿಯೋ ಜಾಹೀರಾತಿನ ಮೂಲಕ ಅಪರಿಚಿತರನ್ನು ಸಂಪರ್ಕಿಸಿದ್ದರು. ವಂಚಕರು ಅವರನ್ನು ‘Manav Verma’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಇದನ್ನು ನಂಬಿದ ಅನಿಲ್, ಹೆಚ್ಚಿನ ಲಾಭದ ಆಸೆಯಿಂದ 2025ರ ಡಿಸೆಂಬರ್ 2ರಿಂದ 2026ರ ಫೆಬ್ರವರಿ 9ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹57,70,945.60 ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಹಣ ವರ್ಗಾವಣೆಯಾದ ನಂತರ ಆರೋಪಿಗಳು ಲಾಭಾಂಶವನ್ನಾಗಲಿ ಅಥವಾ ಹೂಡಿಕೆ ಮಾಡಿದ ಅಸಲು ಹಣವನ್ನಾಗಲಿ ಮರಳಿಸದೆ ಸಂಪರ್ಕ ಕಡಿತಗೊಳಿಸಿದ್ದಾರೆ. ತಾನು ವಂಚನೆಗೊಳಗಾಗಿರುವುದು ತಿಳಿಯುತ್ತಿದ್ದಂತೆ ಅನಿಲ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಐಟಿ ಆಕ್ಟ್ ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Powered by Blogger.