ಸೈಬರ್ ಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ
ಕೆಲಸಕ್ಕೆಂದು ಮನೆಯಿಂದ ಹೋದ ಯುವತಿಯೊರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅರಳ ಗ್ರಾಮದ ಮುಲಾರಪಟ್ನ ನಿವಾಸಿ ಕುಮಾರಿ ಫಾತಿಮತ್ ಇಪ್ರಾ(18) ಕಾಣೆಯಾದ ಯುವತಿಯಾಗಿದ್ದಾಳೆ.
ಕಂಪ್ಯೂಟರ್ ತರಬೇತಿ ಹೊಂದಿರುವ ಈಕೆ ಬಿಸಿರೋಡಿನಲ್ಲಿರುವ ಬಿಸಿರೋಡು ಒನ್ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು.ಮಾ.24 ರಂದು ಸೈಬರ್ ಗೆ ಕೆಲಸಕ್ಕೆಂದು ಹೋದವಳು ಮನೆಗೆ ಬರದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ರಝೀಯಾ ಅವರು ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ.

Post a Comment